ಬೆಂಗಳೂರು: ನೀವೇನಾದ್ರು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ….ಒಂದು ವೇಳೆ ಟ್ಯಾಕ್ಸ್ ಏನಾದರೂ ಬಾಕಿ ಉಳಿಸಿಕೊಂಡಿದ್ರೆ ಈ ಕೂಡಲೇ ಪಾವತಿಸಿಬಿಡಿ.ಇಲ್ಲಾ ಅಂದರೆ ನಿಮ್ಮ ಆಸ್ತಿ ಮಾರಾಟ ಮಾಡೋಕೆ ಆಗಲ್ವಾಂತೆ ಹೌದು .ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ದ ಕಠಿಣ ಅಸ್ರ ಪ್ರಯೋಗಿಸಲು ಪಾಲಿಕೆ,ಮುಂದಾಗ್ತಿದೆ. ಹಾಗಾದ್ರೆ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಮಾಡಿರೋ ಹೊಸ ಹೇಗಿರಲಿದೆ ಅನ್ನೋ ರಿಪೋರ್ಟ್ ಇಲ್ಲಿದೆ
ಆಸ್ತಿ ತೆರಿಗೆ ಬಿಬಿಎಂಪಿಯ ಪ್ರಮುಖ ಆದಾಯ ಮೂಲ..ಇವರು ಕಟ್ಟುವ ಆಸ್ತಿ ತೆರಿಗೆಯಿಂದ್ಲೇ ಬೆಂಗಳೂರಿ ಉದ್ದಾರ ಆಗೋದು. ಆದ್ರೆ ಆಸ್ತಿ ತೆರಿಗೆ ಕಟ್ಟೋದಕ್ಕೆ ಮಾತ್ರ ಜನ ಹಿಂದೇಟು ಹಾಕ್ತಿದ್ದಾರೆ. ಬರಬೇಕಾದ ಟ್ಯಾಕ್ಸ್ ವಸೂಲಿ ಮಾಡೋದಕ್ಕೆ ಅಂತೂ ಪಾಲಿಕೆಗೆ ತಲೆನೋವಾಗಿದೆ. .ಪ್ರತಿವರ್ಷ ನಿಗದಿತ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಯೋಜನೆ ರೂಪಿಸಿದ್ರೂ ನಿರೀಕ್ಷಿತ ತೆರಿಗೆ ಮಾತ್ರ ಖಾಜಾನೆಗೆ ಬಂದು ಸೇರುತ್ತಿಲ್ಲ..ಪ್ರಸ್ತುತ ವರ್ಷದಲ್ಲಿ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆ ಹೊಂದಿತ್ತು.ಆದರೆ ಸಂಗ್ರಹವಾಗಿರೋದು ಮಾತ್ರ 2400 ಕೋಟಿ ..ಗುರಿ ತಲುಪಲು ಇನ್ನೂ ಕೋಟಿ ಕೋಟಿ ಸಂಗ್ರಹವಾಗಬೇಕಿದೆ.ತೆರಿಗೆ ಕಟ್ಟಿರಪ್ಪ ಅಂದರೂ ಜನ ಕಟ್ಟುತ್ತಿಲ್ಲ..ಇದು ಪಾಲಿಕೆ ಅಧಿಕಾರಿಗಳಿಗೆ ಬಿಸಿ ತುಪ್ಪವಾಗಿದೆ. .ಇದೀಗ ಬಾಕಿ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ಮತ್ತೊಂದು ಅಸ್ತ್ರ ಪ್ರಯೋಗಿಸುತ್ತಿದೆ.
Public Exam: 2023-24ನೇ ಸಾಲಿನ 5,8,9 ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ!
ದೊಡ್ಡ ದೊಡ್ಡ ಐಟಿ ಬಿಟಿ ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಕೋಟ್ಯಾಂತರ ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ.ಇವರಿಗೆ ಎಷ್ಟು ಬಾರಿ ನೋಟೀಸ್ ನೀಡಿದ್ರೂ ತೆರಿಗೆ ಮಾತ್ರ ಕಟ್ಟೋಕೆ ಮುಂದಾಗುತ್ತಿಲ್ಲ..ಇದರಿಂದ ಬೇಸತ್ತಿರುವ ಪಾಲಿಕೆ, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆ ಮಾಲೀಕರ ವಿರುದ್ದ ಕಾನೂನು ಸಮರ ಸಾರಲು ನಿರ್ಧಾರ ಮಾಡಿದೆ. ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಆಸ್ತಿದಾರರ ಆಸ್ತಿ ಮಾರಾಟವಾಗಂತೆ ತಡೆಯಲು ಸಬ್ ರಿಜಿಸ್ಟ್ರೇರ್ ಕಚೇರಿಗೆ ಪತ್ರ ಬರೆಯಲು ಮುಂದಾಗಿದೆ. ಮಾಲೀಕರು ಆಸ್ತಿ ಮಾರಾಟದ ವೇಳೆ ಬೇರೆಯವರಿಗೆ ಖಾತಾ ಮಾಡದಂತೆ ಸಬ್ ರಿಜಿಸ್ಟ್ರಾರ್ ನಿರ್ದೇಶನ ನೀಡಲಿದೆ. ಆಸ್ತಿ ತೆರಿಗೆ ಕಟ್ಟಿದ ಮಾಲೀಕ ಆಸ್ತಿ ಮಾತ್ರ ಮಾರಾಟ ಮಾಡೋಕೆ ಅವಕಾಶ ಮಾಡಿಕೊಡಲಿದೆ
ಮೊದಲ ಹಂತವಾಗಿ ಪ್ರತಿ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರ ಪಟ್ಟಿ ಮಾಡಿ ಅವರ ವಿರುದ್ದ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ..ಪಾಲಿಕೆ ನಡೆಯುವುದೇ ತೆರಿಗೆ ಹಣದಿಂದ, ವಿಪರ್ಯಾಸವೆಂದರೆ ಜನರು ತೆರಿಗೆ ಹಣವೇ ಕಟ್ಟುತ್ತಿಲ್ಲ. ಮಲ್ಟಿಪಲ್ ಪ್ರಾಪರ್ಟಿ ಹೊಂದಿರುವವರೇ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದ್ದಾರೆ ಅನ್ನೋದು ಗಮನಾರ್ಹವಾಗಿದೆ. ಹೀಗಾಗಿ ತೆರಿಗೆ ಉಳಿಸಿಕೊಂಡ ಜನಕ್ಕೆ ನೋಟಿಸ್ ನೀಡಲಾಗಿದೆ. ಜೊತೆಗೆ ಸಾವಿರಾರು ಜನಕ್ಕೆ ಜಪ್ತಿ ವಾರೆಂಟ್ ನೀಡಲಾಗಿದೆ. ಆದರು ಟ್ಯಾಕ್ಸ್ ಕಟ್ಟುತ್ತಿಲ್ಲ. ಇದರಿಂದ ಬೇಸತ್ತ ಬಿಬಿಎಂಪಿ ಆಸ್ತಿ ತೆರಿಗೆ ಮತ್ತು ಸುಧಾರಣಾ ಶುಲ್ಕ ಪಾವತಿ ಮಾಡದ ಮಾಲೀಕರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಎಚ್ಚರಿಕೆ ಸಹ ನೀಡಿದೆ. ಆದರೆ ತೆರಿಗೆ ಸಂಗ್ರಹವಾಗಿಲ್ಲ. ಇದೀಗ ಸಬ್ ರಿಜಿಸ್ಟ್ರಾರ್ ಗಳಲ್ಲಿ ಖಾತೆ ಸ್ಥಗಿತ ಮಾಡಲು ನಿರ್ಧಾರ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಉಳಿಸಿಕೊಂಡವರ ಸಂಖ್ಯೆ ಅಧಿಕವಾಗಿದ್ದು, ಪಾಲಿಕೆಗೆ ನೂರಾರು ಕೋಟಿ ತೆರಿಗೆ ಬಾಕಿ ಬರಬೇಕಿದೆ.. ಒಟ್ಟಿನಲ್ಲಿ ಪಾಲಿಕೆಗೆ ನಿಯತ್ತು ಆಗಿ ತೆರಿಗೆ ಕಟ್ಟಬೇಕಾದವರೇ ಕೋಟಿ ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಪಾಲಿಕೆ ಏನೋ ತೆರಿಗೆ ವಂಚಿಸಿದವರ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನ ವೆಬ್ಸೈಪಟ್ಗೆೋ ಹಾಕಿ ತೆರಿಗೆ ವಸೂಲಿ ಮಾಡಲು ನಿಂತಿದೆ. ಆದರು ನಿಯತ್ತಿನಿಂದ ಯಾರು ತೆರಿಗೆ ಕಟ್ಟಿಲ್ಲ. ನೋಟಿಸ್, ಜಪ್ತಿ ವಾರೆಂಟ್ ಗೂ ಜಗ್ಗದ ಟ್ಯಾಕ್ಸ್ ವಂಚಕರು ಇದೀಗ ಆಸ್ತಿ ,ಮಾರಾಟ ವೇಳೆ ಖಾತೆಯಾಗೋದು ನಿಲ್ಲಿಸಿದ್ರೆ ಟ್ಯಾಕ್ಸ್ ಕಟ್ಟುತ್ತಾರಾ ಅನ್ನೋದನ್ನ ಕಾದುನೋಡಬೇಕು.