ಬೆಂಗಳೂರು:- ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಹುತೇಕ ಖಚಿತ ಆಗಲಿದ್ದು, BMRCL ಜನರ ಅಭಿಪ್ರಾಯ ಕೋರಿದೆ
BBK 11: ಫೇಸ್ಬುಕ್ ಲಾಯರ್ ಜಗದೀಶ್ ವಕೀಲರೇ ಅಲ್ವಂತೆ! ಬಿಗ್ ಬಾಸ್ ಹೋದ್ಮೇಲೆ ವಂಚನೆ ಬಯಲು!
ಮೆಟ್ರೊ ರೈಲು ದರ ನಿಗದಿ ಸಮಿತಿ’ಗೆ ಅಕ್ಟೋಬರ್ 21 ರೊಳಗೆ ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಕೋರಿದೆ. ನಾಗರಿಕರು ತಮ್ಮ ಸಲಹೆಗಳನ್ನು [email protected] ಗೆ ಇಮೇಲ್ ಮಾಡಬಹುದು ಅಥವಾ 3ನೇ ಮಹಡಿ, ‘ಸಿ’ ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು-560027 ಈ ವಿಳಾಸಕ್ಕೆ ಪತ್ರ ಬರೆದು ‘ಮೆಟ್ರೊ ರೈಲು ದರ ನಿಗದಿ ಸಮಿತಿ’ ಅಧ್ಯಕ್ಷರಿಗೆ ಅಭಿಪ್ರಾಯ ತಿಳಿಸಬಹುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದು ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34 ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ರಚಿಸಲಾದ ಬಿಎಂಆರ್ಸಿಎಲ್ನ ಮೊದಲ ದರ ನಿಗದಿ ಸಮಿತಿಯಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾದ ನಂತರ ಒಂದು ಬಾರಿ ದರ ಪರಿಷ್ಕರಣೆ ಮಾಡಲಾಗಿದೆ. 2017 ರಲ್ಲಿ ಟಿಕೆಟ್ ದರವನ್ನು ಶೇ 10-15 ರಷ್ಟು ಹೆಚ್ಚಿಸಲಾಗಿತ್ತು.