ಬೆಂಗಳೂರು:- ಗಣೇಶ ಚತುರ್ಥಿ ಮುಗಿದ ಬೆನ್ನಲ್ಲೇ ಮಾಂಸಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಚಿಕನ್ ಹಾಗೂ ಮಟನ್ ಬೆಲೆ ಒಂದೇ ವಾರದಲ್ಲಿ ಏರಿಕೆಯಾಗಿದೆ.
ಪುಟ್ಟ ಮಕ್ಕಳಿಗೆ ಬೆಳ್ಳಿ ವಸ್ತು ಹಾಕೋದ್ಯಾಕೆ!? ವೈಜ್ಞಾನಿಕ ಕಾರಣ ತಿಳಿಯಲೇಬೇಕು!?
ಶ್ರಾವಣಮಾಸ ಮುಗಿಯುತ್ತಿದ್ದಂತೆ ಮಾಂಸಕ್ಕೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಹೀಗಾಗಿ ಮಾಂಸದ ದರ ಏರಿಕೆಯಾಗಿದೆ. ಕಳೆದ ವಾರ ಚಿಕನ್ ಬೆಲೆ 100 ರಿಂದ 150 ರ ಗಡಿಯಲ್ಲಿತ್ತು. ಈ ವಾರ 250 ರಿಂದ 260 ರುಪಾಯಿಗೆ ಚಿಕನ್ ಬೆಲೆ ಏರಿಕೆಯಾಗಿದೆ. ಮಟನ್ ಬೆಲೆಯು 800 ರಿಂದ 900 ರೂಗೆ ಏರಿಕೆಯಾಗಿದ್ದು, ಮುಂದಿನ ತಿಂಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ
ಎನ್ನಲಾಗುತ್ತಿದೆ. ಇನ್ನು, ಮುಂದಿನ ತಿಂಗಳು ಆಯುಧಪೂಜೆ ಇರುವ ಕಾರಣ ಚಿಕನ್ ಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳ್ತಿದ್ದಾರೆ.
ಇನ್ನು ಚಿಕನ್ ಬೆಲೆ ಎಷ್ಟೇ ದುಬಾರಿಯಾದ್ರು ಚಿಕನ್, ಮಟನ್ ತಿನ್ನಲೇ ಬೇಕು. ಹಬ್ಬ ಕಳೆದ ಮೇಲೆ ವರ್ಷದ ತೊಡಕು ಮಾಡ್ಲಿಲ್ಲ ಅಂದ್ರೆ ಆಗೋದೇ ಇಲ್ಲ. ಶ್ರಾವಣ ಮಾಸದ ಕಾರಣ ಒಂದು ತಿಂಗಳು ಚಿಕನ್ ತಿಂದೆ ಇರ್ಲಿಲ್ಲ. ಇದೀಗಾ ಹಬ್ಬ ಮುಗಿಸಿ ವರ್ಷತೊಡಕು ಮಾಡ್ತಿದ್ದೀವಿ ಅಂತ ಗ್ರಾಹಕರು ಹೇಳಿದರು.
ಒಟ್ನಲ್ಲಿ, ಶ್ರಾವಣ ಮಾಸದ ಹಬ್ಬದ ಕಾರಣ ನಾನ್ ವೆಜ್ ಡಿಮ್ಯಾಂಡ್ ಕಡಿಮೆಯಾಗಿತ್ತು. ಇದೀಗಾ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಸಿಲಿಕಾನ್ ಮಂದಿ ಅದ್ದೂರಿಯಿಂದ ವರ್ಷತೊಡಕು ಆಚಾರಿಸುತ್ತಿದ್ದಾರೆ. ಮಾಂಸ ಪ್ರಿಯರಿಗೆ ಮಾಂಸ ಬೆಲೆ ಏರಿಕೆ ಶಾಕ್ ತಂದಿದೆ.