ಬೆಂಗಳೂರು:- ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಾಕಲಾಗುತ್ತಿದೆ.
45 ನೌಕರರನ್ನು ವಜಾ ಮಾಡಿದ ನಿರಾಣಿ ಶುಗರ್ಸ್ ಕಂಪನಿ: ಚಿಮಿಣಿ ಏರಿ ಕುಳಿತ ಕಾರ್ಮಿಕ!
ಇನ್ನೂ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರ ಸಬಲೀಕರಣ ಆಗುತ್ತಿದೆ. ಪುರುಷರ ಮೇಲೀನ ಮಹಿಳೆಯರ ಅವಲಂಬನೆ ಕಮ್ಮಿ ಆಗುತ್ತಿದೆ. ಗ್ರಾಮೀಣ ಭಾಗದ ಆರ್ಥಿಕತೆ ವೃದ್ಧಿಸುತ್ತಿದೆ ಎಂಬಿತ್ಯಾದಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇವೆಲ್ಲದರ ನಡುವೆ ಅಪಾತ್ರರಿಗೂ ಗೃಹಲಕ್ಷ್ಮೀ ಯೋಜನೆ ಹಣ ಹೋಗುತ್ತಿದೆ ಎನ್ನುವ ಟೀಕೆಗಳೂ ಕೇಳಿಬರುತ್ತಿದ್ದು ಅಂಥವರನ್ನು ಗುರುತಿಸಿ ಕೈಬಿಡುವ ಕೆಲಸ ನಡೆಯುತ್ತಿದೆ.
ಗೃಹಲಕ್ಷ್ಮೀ ಯೋಜನೆ ಬಗ್ಗೆ ಈಗ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅಷ್ಟು ಮಾತ್ರವಲ್ಲ ವಿದೇಶಗಳಲ್ಲೂ ಕೂಡ ವ್ಯಾಪಕವಾದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಈ ಯೋಜನೆ ನಿಜಕ್ಕೂ ಅರ್ಹರಿಗೆ ಸಿಗಬೇಕು ಎನ್ನುವುದು ಸರ್ಕಾರದ ನಿಲುವು ಇದೇ ದೃಷ್ಟಿಯಿಂದ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅಂಥವರನ್ನು ಯೋಜನೆಯಿಂದ ಕೈಬಿಡುವ ಕೆಲಸ ಶುರುವಾಗಿದೆ ಎನ್ನಲಾಗುತ್ತಿದೆ.
ಮೊದಲನೆಯದಾಗಿ ಸರ್ಕಾರ ಅಕ್ರಮವಾಗಿ ರೇಷನ್ ಕಾರ್ಡ್ ಪಡೆದಿರುವವರನ್ನು ಗುರುತಿಸುತ್ತಿದೆ. ಶೀಘ್ರವೇ ಅಂಥ ಅಕ್ರಮ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತದೆ. ಆಗ ಅವರಿಗೆ ಅನ್ನಭಾಗ್ಯ ಯೋಜನೆಯ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತಿರುವುದು ನಿಲ್ಲುತ್ತದೆ. ಜೊತೆಗೆ ಬಿಪಿಎಲ್ ಕಾರ್ಡ್ ಇಲ್ಲದವರನ್ನು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಅನರ್ಹರು ಎಂದು ನಿರ್ಧರಿಸಲಾಗುತ್ತದೆ.
ಅನರ್ಹರ ಪಟ್ಟಿಯನ್ನು ಈ ರೀತಿ ಚೆಕ್ ಮಾಡಿ:
ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.karnataka.gov.in/Home/EServices ಗೆ ಹೋಗಿ. ನಂತರ ಅಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. e-Ration Card ಎಂಬ ಆಯ್ಕೆಯಲ್ಲಿನ Show Cancelled/suspend list ಮೇಲೆ ಕ್ಲಿಕ್ ಮಾಡಿ. ಅದಾದ ಮೇಲೆ ನಿಮ್ಮ ಜಿಲ್ಲೆ, ತಾಲೂಕು ಮತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಿ. ಆಗ ನೀವು ಅನರ್ಹಗೊಂಡಿರುವ ಪಡಿತರ ಚೀಟಿದಾರ ಪಟ್ಟಿಯನ್ನು ನೋಡಬಹುದು. ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ಯಾವ ಕಾರಣಕ್ಕೆ ರದ್ದು ಮಾಡಲಾಗಿದೆ ಎಂಬ ಮಾಹಿತಿಯನ್ನೂ ಕೂಡ ನೀಡಲಾಗಿರುತ್ತದೆ.