ಹಿಟ್ ಮ್ಯಾನ್ ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದ್ದು, ರೋಹಿತ್ ಶರ್ಮಾ ಕರಿಯರ್ ಅಂತ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಟೆಸ್ಟ್ನಲ್ಲಿ ವೈಫಲ್ಯ ಕಂಡಿರುವ ಹಿಟ್ಮ್ಯಾನ್, ಈಗ ವೈಟ್ ಬಾಲ್ ಕ್ರಿಕೆಟ್ನಲ್ಲಿ ಫಾರ್ಮ್ಗೆ ಮರಳ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ
ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ಕೊಟ್ಟ ಸಿಹಿ ಸುದ್ದಿ ಇಲ್ಲಿದೆ!
ಆಸ್ಟ್ರೇಲಿಯಾ ಸಿರೀಸ್ನಲ್ಲಿ ಫೇಲಾಗಿರುವ ರೋಹಿತ್, ಈಗ ಏಕದಿನ ಫಾರ್ಮೆಟ್ನ ಸವಾಲು ಎದುರಾಗಿದೆ. ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರೋ ವೈಟ್ಬಾಲ್ ಲೆಜೆಂಡ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಪರ್ಫಾಮ್ ಮಾಡ್ತಾರಾ ಅನ್ನೋ ಪ್ರಶ್ನೆ ಇದೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಒನ್ ಆಫ್ ದಿ ಬೆಸ್ಟ್ ಓಪನರ್ ಆಗಿರುವ ರೋಹಿತ್ ಶರ್ಮಾ, ಟೀಕೆಗಳಿಗೆ ಆನ್ಸರ್ ನೀಡೋಕೆ ರೆಡಿಯಾಗಿದ್ದಾರೆ.
ಟೆಸ್ಟ್ನಲ್ಲಿ ರೋಹಿತ್ ಫೇಲಾದ್ರೂ ಏಕದಿನ ಫಾರ್ಮೆಟ್ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನವನ್ನ ನೀಡಿದ್ದಾರೆ. 2023ರಿಂದ ಸಾಲಿಡ್ ಫಾರ್ಮ್ನಲ್ಲಿ ಬ್ಯಾಟ್ ಬೀಸಿರೋ ಹಿಟ್ಮ್ಯಾನ್ ಹೀಗಾಗಿ ಚಾಂಪಿಯನ್ಸ್ ಟ್ರೋಪಿಯಲ್ಲಿ ಕಮಾಲ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ.
2023ರಿಂದ 27 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್, 1255 ರನ್ ಕಲೆ ಹಾಕಿದ್ದಾರೆ. ಬರೋಬ್ಬರಿ 52.29ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಗಳಿಸಿರುವ ರೋಹಿತ್, 2 ಶತಕ ದಾಖಲಿಸಿದ್ದಾರೆ. ಈ ಫಾರ್ಮ್ ಮುಂದುವರೆಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ ಗಳಿಸುವ ಉತ್ಸಾಹದಲ್ಲಿ ರೋಹಿತ್ ಇದ್ದಾರೆ.
ವೈಟ್ ಬಾಲ್ ಫಾರ್ಮೆಟ್ನಲ್ಲಿ ರೋಹಿತ್ ಪರಾಕ್ರಮಿ ಅನ್ನೋದ್ರಲ್ಲಿ ಡೌಟಿಲ್ಲ. ಕಳೆದ ಲಂಕಾ ಸಿರೀಸ್ನಲ್ಲಿ ರೋಹಿತ್, ಹೇಳಿಕೊಳ್ಳುವ ಆಟವಾಡಿಲ್ಲ. ಸದ್ಯ ಟೆಸ್ಟ್ನಲ್ಲೂ ರನ್ ಗಳಿಸಿಲ್ಲ. ಮುಂದೆಯೂ ಇದೇ ಬ್ಯಾಡ್ ಫಾರ್ಮ್ ಮುಂದುವರಿಸಿದ್ರೆ, ಟೀಮ್ ಮ್ಯಾನೇಜ್ಮೆಂಟ್ ರೋಹಿತ್ ಭವಿಷ್ಯದ ಬಗ್ಗೆ ಟಫ್ ಕಾಲ್ ತೆಗೆದುಕೊಳ್ಳುವುದರಲ್ಲಿ ಡೌಟೇ ಇಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚದಿದ್ರೆ ರೋಹಿತ್ ಕರಿಯರ್ ಫುಲ್ ಸ್ಟಾಫ್ ಬೀಳೋ ಸಾಧ್ಯತೆ ದಟ್ಟವಾಗಿದೆ.
ರೋಹಿತ್ ಶರ್ಮಾಗೆ ಚಾಂಪಿಯನ್ಸ್ ಟ್ರೋಫಿ ಕೊನೆ ಆಗುತ್ತಾ ಎಂಬ ಪ್ರಶ್ನೆಗೆ ಕಾರಣ ಬ್ಯಾಡ್ ಫಾರ್ಮ್ ಮಾತ್ರ ಅಲ್ಲ. ಟೀಮ್ ಮ್ಯಾನೇಜ್ಮೆಂಟ್ನ ಭವಿಷ್ಯದ ಲೆಕ್ಕಾಚಾರವೂ ಆಗಿದೆ. ಓಪನರ್ ಸ್ಥಾನ ತುಂಬಲು ಸಾಲು ಸಾಲು ಯುವ ಆಟಗಾರರ ದಂಡೇ ಇದೆ. ಮುಂಬೈನ ಯಶಸ್ವಿ ಜೈಸ್ವಾಲ್ ಮೇಲೆ ಟೀಮ್ ಮ್ಯಾನೇಜ್ಮೆಂಟ್ನ ಒಲವಿದೆ. ಈಗಾಗಲೇ ಟೆಸ್ಟ್, ಟಿ20ಯಲ್ಲಿ ಯಶಸ್ವಿಯಾಗಿರುವ ಜೈಸ್ವಾಲ್, ಏಕದಿನ ಕ್ರಿಕೆಟ್ಗೂ ಹೇಳಿ ಮಾಡಿಸಿರೋ ಪ್ಲೇಯರ್.. ಈ ಕಾರಣಕ್ಕೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ನೀಡಲು ಮ್ಯಾನೇಜ್ಮೆಂಟ್ ಮುಂದಾಗಿದೆ.