ಮುಂಬೈ ಇಂಡಿಯನ್ಸ್ ತಂಡದ ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಗೆ ಬಿಗ್ ಶಾಕ್ ಎದುರಾಗಿದ್ದು, ರೋಹಿತ್ ಶರ್ಮಾಗೆ ಬಿಗ್ ಆಫರ್ ಕೊಡಲಾಗಿದೆ ಎಂದು ವರದಿಗಳು ಹೇಳಿದೆ.
ಐದು ಬಾರಿ ಕಪ್ ಗೆದ್ದಿರೋ ಮುಂಬೈ ಇಂಡಿಯನ್ಸ್ಗೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ. ಒಂದು ಸೀಸನ್ನಲ್ಲಿ ಕಪ್ ಗೆಲ್ಲಿಸಿ, ಮತ್ತೊಂದು ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಫೈನಲ್ಗೆ ಕರೆದೊಯ್ದಿದ್ದಕ್ಕೆ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ಗೆ ಕರೆಸಿ ಕ್ಯಾಪ್ಟನ್ಸಿ ನೀಡಲಾಯ್ತು. ಆದರೆ, ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿತ್ತು. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶ ಮಾಡಲಿಲ್ಲ. ಇದರ ಮಧ್ಯೆ ಮುಂದಿನ ಸೀಸನ್ಗೆ ಹಾರ್ದಿಕ್ ಜಾಗಕ್ಕೆ ಮತ್ತೆ ರೋಹಿತ್ ಶರ್ಮಾ ಅವರೇ ಕ್ಯಾಪ್ಟನ್ ಆಗಿ ಬರಬಹುದು ಎಂದು ಮುಂಬೈ ಇಂಡಿಯನ್ಸ್ ಮೂಲಗಳು ತಿಳಿಸಿವೆ.
2024ರ ಆವೃತ್ತಿಯಲ್ಲಿ ಮುಂಬೈ ಕಳಪೆ ಪ್ರದರ್ಶನ ನೀಡಿದೆ. ಹಾಗಾಗಿ ರೋಹಿತ್ ಶರ್ಮಾ ಅವರನ್ನು ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಬಹುದು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ರೋಹಿತ್ ಶರ್ಮಾ ಐದು ಐಪಿಎಲ್ ಕಪ್ ಗೆದ್ದುಕೊಟ್ಟ ನಾಯಕ. ರೋಹಿತ್ ನಾಯಕತ್ವ ಕಿತ್ತುಕೊಂಡು ಹಾರ್ದಿಕ್ ಪಾಂಡ್ಯಗೆ ನೀಡಿದರು. ನಾಯಕನನ್ನು ಬದಲಾಯಿಸುವುದು ದೊಡ್ಡ ನಿರ್ಧಾರ. ಆದರೆ, ಕಪ್ಗಾಗಿ ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನೇ ಕ್ಯಾಪ್ಟನ್ ಮಾಡುವ ನಿರ್ಧಾರ ತಮ್ಮದು ಎಂದು ಫ್ರಾಂಚೈಸಿ ಆಪ್ತ ಮೂಲಗಳಿಂದ ತಿಳಿದು ಬಂದಿದೆ.