ಬೆಂಗಳೂರು:- ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಡೆ ಇಂದು ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭ್ರಷ್ಟರಿಗೆ ಶಾಕ್ ಕೊಟ್ಟಿದೆ.
‘ಮಾಣಿಕ್ಯ’ ನಟಿಗೆ ಬರ್ತಡೇ ಸೆಲಬ್ರೇಷನ್: ಪಾರ್ಟಿಯಲ್ಲಿ ಭಾಗಿಯಾದ ಸುದೀಪ್ ಪತ್ನಿ, ಮಗಳು!
ರಾಜ್ಯದ ಒಟ್ಟು ಎಂಟು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಲೋಕಾ ಟೀಮ್, ಹಲವು ದಾಖಲೆ ಪರಿಶೀಲನೆ ಮಾಡಿದ್ದಾರೆ. ಡಿಪಿಎಆರ್ ಚೀಫ್ ಇಂಜಿನಿಯರ್ ಟಿಡಿ ನಂಜುಂಡಪ್ಪ ಮನೆ ಮೇಲೆ ದಾಳಿ ನಡೆಸಲಾಗಿದೆ. ಕ್ವಾಲಿಟಿ ಕಂಟ್ರೋಲ್ ಹಾಗೂ ಕ್ವಾಲಿಟಿ ಅಶ್ಯುರೇನ್ಸ್ ನ ಬಿಬಿಎಂಪಿ ಎಕ್ಸೀಕ್ಯೂಟಿವ್ ಇಂಜಿನಿಯರ್ ಹೆಚ್.ಬಿ ಕಲ್ಲೇಶಪ್ಪ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆ ಪರಿಶೀಲನೆ ಮಾಡಲಾಗಿದೆ. ಕೋಲಾರ ಟೌನ್ ಬೆಸ್ಕಾಂ ಎಇಇ ಜಿ ನಾಗರಾಜ್ ಮನೆ ಮೇಲೆ ದಾಳಿ ನಡೆದಿದೆ. ಕರುಬುರುಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೂನಿಟ್ ನ ಅಧಿಕಾರಿ ಜಗನ್ನಾಥ್ ಮನೆ ಮೇಲೆ ದಾಳಿ ನಡೆದಿದೆ. ದಾವಣಗೆರೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ ಡಿಸ್ಟಿಕ್ ಸ್ಟ್ಯಾಟಿಕಲ್ ಆಧಿಕಾರಿ ಜಿಎಸ್ ನಾಗರಾಜು ಮನೆ ಮೇಲೆ ದಾಳಿ ನಡೆದಿದ್ದು, ತುಮಕೂರು ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್ ಮನೆ ಮೇಲೆ ದಾಳಿ ನಡೆದು ಮಹತ್ತರ ದಾಖಲೆ ಪರಿಶೀಲಿಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಎಫ್ ಡಿಎ ಮಲ್ಲಪ್ಪ ಸಾಬಣ್ಣ ಮನೆ ಮೇಲೆ ದಾಳಿ ನಡೆದಿದ್ದು, ವಿಜಯಪುರ ಹೌಸಿಂಗ್ ಬೋರ್ಡ್ ಎಫ್ ಡಿ ಎ ಶಿವಾನಂದ್ ಶಿವಶಂಕರ್ ಕಂಬಾವಿ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ.