ಬೆಂಗಳೂರು:- ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಬೆಂಗಳೂರು ಮೆಟ್ರೊ ದರ 46% ವರೆಗೂ ಏರಿಕೆಯಾಗಲಿದ್ದು, ಭಾನುವಾರದಿಂದಲೇ ಅಧಿಕೃತವಾಗಿ ಜಾರಿಯಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ಸಿನದು ದೆಹಲಿಯಲ್ಲಿ ಶೂನ್ಯ ಸಂಪಾದನೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ!
ಗರಿಷ್ಠ 90 ರೂ., ಕನಿಷ್ಠ 10 ರೂ. ಏರಿಕೆಯಾಗಲಿದೆಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಮೂಲಗಳು ತಿಳಿಸಿದೆ. ಮೊದಲೇ ಬಸ್ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಈ ಸಂಬಂಧ ಬಿಎಂಆರ್ಸಿಎಲ್ ಅಧಿಕಾರಿಗಳು ಮತ್ತು ದರ ಏರಿಕೆ ಸಮಿತಿಯ ಸದಸ್ಯರ ಜೊತೆ ಕೆಲ ದಿನಗಳ ಹಿಂದೆ ಹೈವೊಲ್ಟೇಜ್ ಸಭೆ ನಡೆದಿತ್ತು.
ಕಳೆದ 8 ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.
ಸಮಿತಿ ನೀಡಿರುವ ವರದಿಯಲ್ಲಿ ಏನಿದೆ?
– ಮೆಟ್ರೋ ಟಿಕೆಟ್ ದರವನ್ನ 40 ರಿಂದ 45% ವರೆಗೆ ಏರಿಕೆ ಮಾಡಬಹುದು.
– ರಜೆ ದಿನ ಹಾಗೂ ನಾನ್ ಪೀಕ್ ಅವರ್ ನಲ್ಲಿ ಪ್ರಯಾಣ ದರ ಇಳಿಕೆ ಮಾಡಿದರೆ ಉತ್ತಮ.
– ಸಾರ್ವಜನಿಕರ ರಜಾ ದಿನಗಳಲ್ಲಿ ರಿಯಾಯಿತಿ ನೀಡಬೇಕು.
– ನಾನ್ ಪೀಕ್ ಅವರ್ಗಳಲ್ಲಿ ಡಿಸ್ಕೌಂಟ್ ನೀಡಬೇಕು.
– ವಿಶೇಷ ದಿನಗಳಲ್ಲಿ ಡಿಸ್ಕೌಂಟ್ ನೀಡಲು ಸೂಚನೆ.
– ಪ್ರತಿನಿತ್ಯ ಬೆಳಗ್ಗೆ 8 ಗಂಟೆಯೊಳಗೆ ಹಾಗೂ ಮಧ್ಯಾಹ್ನದಿಂದ ಸಂಜೆ 4 ಗಂಟೆಯವರಿಗೆ ಡಿಸ್ಕೌಂಟ್ಗೆ ಶಿಫಾರಸು
– ಪ್ರಯಾಣಿರನ್ನು ಸೆಳೆಯಲು ರಿಯಾಯಿತಿ ಪ್ರಯಾಣಕ್ಕೆ ಪ್ಲಾನ್