ಬೆಂಗಳೂರು: ಕಾಫಿಯನ್ನು ಇಷ್ಟಪಡದೇ ಇರುವವರಾದರೂ ಯಾರಿದ್ದಾರೆ? ಆದರೆ ಕಾಫಿ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಕಾದಿದ್ದು, ಬೆಂಗಳೂರಿನಲ್ಲಿ ಇನ್ನಷ್ಟು ದುಬಾರಿಯಾಗಲಿದೆ ಕಾಫಿ ದರ ಎಂದು ಹೇಳಲಾಗಿದೆ. ಕರ್ನಾಟಕವು ಭಾರತದ ಅತಿದೊಡ್ಡ ಕಾಫಿ ಬೆಳೆಯುವ ರಾಜ್ಯವಾಗಿದ್ದು, ಇಲ್ಲಿಯೂ ದರ ಹೆಚ್ಚಳವಾಗಿದೆ.
ಜತೆಗೆ, ಭಾರತದಾದ್ಯಂತ ಕಾಫಿ ಬೀಜದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 ರೂ. ಇದೆ ದಿ ಕೆಫೀನ್ ಬಾರ್ನ ಚರ್ಚ್ ಸ್ಟ್ರೀಟ್ ಮತ್ತು ಜಯನಗರದಲ್ಲಿ ಔಟ್ಲೆಟ್ಗಳಲ್ಲಿ ಮುಂದಿನ 10 ದಿನಗಳಲ್ಲಿ ಒಂದು ಕಪ್ ಕ್ಯಾಪುಸಿನೊ ಕಾಫಿ ದರ 200 ರೂ.ನಿಂದ 220 ರೂ.ಗೆ ಹೆಚ್ಚಳವಾಗಲಿದೆ.
Stop Eating Rice: ಒಂದು ತಿಂಗಳು ಅನ್ನ ಸೇವಿಸದಿದ್ದರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ..?
ಕೆಫೆಯು ಅರೇಬಿಕಾ ಕಾಫಿ ಬೀಜವನ್ನು ಬಳಸುತ್ತದೆ. ಬೆಲೆಗಳು ಶೇಕಡಾ 40 ರಷ್ಟು ಹೆಚ್ಚಾಗುವುದರೊಂದಿಗೆ, ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಚರ್ಚ್ ಸ್ಟ್ರೀಟ್ನಲ್ಲಿ ಗ್ರಾಹಕರ ಪ್ರತಿಕ್ರಿಯೆ ಬಗ್ಗೆ ಚಿಂತೆ ಇಲ್ಲ. ಆದರೆ, ಜಯನಗರದ ಗ್ರಾಹಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಬೇಕಿದೆ ಎಂದು ಸಹ ಸಂಸ್ಥಾಪಕರು ಹೇಳಿದ್ದಾರೆ.