ಇತ್ತೀಚೆಗೆ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತಿದೆ ಅಂದರೆ ಎಲ್ಲರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡುತ್ತಿಲ್ಲ ಕೇವಲ ಆರ್ಥಿಕವಾಗಿ ಸಬಲರಾಗಿರುವಂತಹ ಹಾಗೂ ಐಟಿ ರಿಟರ್ನ್ ಮಾಡುವಂತಹ ಜನರ ಬಿಪಿಎಲ್ ಪಡಿತರ ಚೀಟಿಯನ್ನು ಮಾತ್ರ ರದ್ದು ಮಾಡಲಾಗುತ್ತಿದೆ.
ಬಿಪಿಎಲ್ ಪಡಿತರ ಚೀಟಿಯು ಬಡತನ ರೇಖೆಗಿಂತ ಕೆಳಗಿರುವಂತಹ ಬಡವರಿಗೆ ಮಾತ್ರ ನೀಡುವಂತಹ ಪಡಿತರ ಚೀಟಿಯಾಗಿದೆ ಒಂದು ವೇಳೆ ಬಡತನ ರೇಖೆಗಿಂತ ಮೇಲೆ ಇರುವ ಯಾವುದೇ ಜನರು ಇದನ್ನು ಅಕ್ರಮ ದಾಖಲೆಗಳಿಂದ ಸಿದ್ದಪಡಿಸಿಕೊಂಡಿದ್ದರೆ ಅಂತವರ ಬಿಪಿಎಲ್ ಪಡಿತರ ಚೀಟಿ ರಾಜ ಆಗುತ್ತದೆ ಜೊತೆಗೆ ಅವರಿಗೆ ದಂಡ ಕೂಡ ಬೀಳುತ್ತದೆ.
ಒಂದು ವೇಳೆ ನೀವು ಕೂಡ ಆರ್ಥಿಕವಾಗಿ ಸಬಲವಾಗಿದ್ದು ಐಟಿ ರಿಟರ್ನ್ ಮಾಡುತ್ತಿದ್ದೀರಿ ಎಂದಿಟ್ಟುಕೊಂಡಿದ್ದಾರೆ ಬೇಗನೆ ಹೋಗಿ ನಿಮ್ಮ ಒಂದು ಪಡಿತರ ಚೀಟಿಯನ್ನು ಹಿಂದಿರುಗಿಸಿ ಏಕೆಂದರೆ ನೀವು ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಅನರ್ಹ ಆಗಿದ್ದೀರಿ.
HSRP ಅಳವಡಿಸದ ವಾಹನ ಸವಾರರಿಗೆ ಗುಡ್ ನ್ಯೂಸ್: ನ.20 ರವರೆಗೆ ಅವಧಿ ವಿಸ್ತರಣೆ
ಬಿಪಿಎಲ್ ಪಡಿತರ ಚೀಟಿ ಹೊಂದಲು ಇರಬೇಕಾದಂತಹ ಅರ್ಹತೆ
- ಬಡತನ ರೇಖೆಗಿಂತ ಕೆಳಗಿರುವಂತಹ ಬಡವರು ಮಾತ್ರ ಅರ್ಹತೆ ಹೊಂದಿದ್ದಾರೆ
- ಮನೆಯಲ್ಲಿ ಯಾವುದೇ ವಾಹನ ಇಲ್ಲದಿರುವವರು ಅರ್ಹತೆ ಹೊಂದಿದ್ದಾರೆ
- ಸರಕಾರಿ ನೌಕರಿ ಮಾಡದೆ ಇದ್ದವರು ಅರ್ಹತೆ ಹೊಂದಿದ್ದಾರೆ
- ಯಾವುದೇ ಖಾಸಗಿ ಕಂಪನಿಗಳಲ್ಲಾಗಲಿ ಅಥವಾ ಇತರೆ ಸಂಸ್ಥೆಗಳಲ್ಲಾಗಲಿ ಕೆಲಸ ಮಾಡದೇ ಇರುವವರು
- ಮಾಸಿಕವಾಗಿ ವೇತನವನ್ನು ತೆಗೆದುಕೊಳ್ಳದೆ ಇರುವವರು
ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರು ಯಾರು?
- ಸರಕಾರಿ ನೌಕರಿ ಮಾಡುವವರು
- ಬಡತನ ರೇಖೆಗಿಂತ ಮೇಲೆ ಇರುವವರು
- ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು
- ಮಾಸಿಕವಾಗಿ ವೇತನವನ್ನು ಪಡೆಯುತ್ತಿರುವವರು
- ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ಹಣ ಸಂಪಾದನೆ ಮಾಡುವವರು