ಬೆಂಗಳೂರು:-ಕರ್ನಾಟಕದ ಜನರೇ, ಇಲ್ಲಿ ನೋಡಿ. ಈ ಸುದ್ದಿ ನೀವು ಪೂರ್ತಿ ಓದಲೇಬೇಕು. ಬಿಪಿಎಲ್ ಕಾರ್ಡ್ ಫಲಾನುಭವಿಗಳೇ ಎಚ್ಚರ! ನೀವು ಬಿಪಿಎಲ್ಗೆ ಅರ್ಹರೇ ಅಂತ ಈಗಲೇ ಪರಿಶೀಲನೆ ಮಾಡಿಕೊಳ್ಳಿ. ಜಿಎಸ್ಟಿ, ಐಟಿ ಕಟ್ಟೋ ಯಾರಾದ್ರೂ ಬಿಪಿಎಲ್ ಕಾರ್ಡ್ ಬಳಸಿದ್ರೆ ಕಂಟಕ ಎದುರಾಗೋದು ಗ್ಯಾರಂಟಿ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಅನುಕೂಲಕ್ಕಾಗಿ ಇರೋ ಕಾರ್ಡ್ ಬಿಪಿಎಲ್. ಇದನ್ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋ ಕಾರಣ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ.
ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರನ್ನು ಎಪಿಎಲ್ಗೆ ಶಿಫ್ಟ್ ಮಾಡಿದೆ.
ಎಣ್ಣೆ ಪ್ರಿಯರೇ ಇದು ನಿಮಗೆ ಗೊತ್ತಾ!? ಬಿಯರ್ ಬಾಟಲ್ ಹಸಿರು, ಕಂದು ಬಣ್ಣದಲ್ಲಿರುತ್ತೆ ಯಾಕೆ!?
ಪರಿಷ್ಕರಣೆಯ ವೇಳೆ ಅಧಿಕಾರಿಗಳು ಸರಿಯಾದ ಮಾನದಂಡಗಳನ್ನು ಬಳಸಿಲ್ಲ. ಪರಿಣಾಮ ಅರ್ಹ ಫಲಾನುಭವಿಗಳು ಕೂಡ ಈಗ ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಲ ಪಡೆಯಲು ITR ಫೈಲ್ ಮಾಡಿದ್ದ ಬಡ ಕಾರ್ಮಿಕರ ಬಿಪಿಎಲ್ ಕಾರ್ಡ್ಗಳೂ ರದ್ದಾಗಿದ್ದು, ಅವರು ತಿಂಗಳ ಅಕ್ಕಿ ಸಿಗದೇ ಒದ್ದಾಡ್ತಿದ್ದಾರೆ. ಆರೋಗ್ಯ ಸೌಲಭ್ಯ ಸಿಗದೇ ಪರದಾಡ್ತಿದ್ದಾರೆ.
ಬಿಪಿಎಲ್ ಕಾರ್ಡ್ ಗೊಂದಲ, ಯಡವಟ್ಟು, ಬಡ ಜನರ ಆಕ್ರೋಶ ಸಹಜವಾಗಿಯೇ ವಿಪಕ್ಷಗಳಿಗೆ ಆಹಾರವಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಗೊಂದಲ ಜನರ ಬಿಪಿ ಏರಿಸಿದೆ. ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿವೆ. ಆದ್ರೆ, ಸರ್ಕಾರ ಮಾತ್ರ ಕಾರ್ಡ್ ರದ್ದು ಮಾಡ್ತಿಲ್ಲ. ಪರಿಷ್ಕರಣೆ ಮಾಡ್ತಿದ್ದೇವೆ. ಅರ್ಹರಿಗೆ ಮಾತ್ರ ನೀಡುತ್ತೇವೆ ಎಂಬ ಸಮರ್ಥನೆಗೆ ಇಳಿದಿದೆ.