ಬೆಂಗಳೂರು:- ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಸದ್ದಿಲ್ಲದೆ ಪಡಿತರ ಚೀಟಿ ರದ್ದಾಗುತ್ತಿವೆ.
ಮೋದಿ ಏಕೆ ನನ್ನ ಸವಾಲು ಸ್ವೀಕರಿಸುತ್ತಿಲ್ಲ, ಏನು ಭಯ ಅವರಿಗೆ..? – ಮೋದಿಗೆ ಸಿದ್ದು ಪ್ರಶ್ನೆ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 11 ಲಕ್ಷ ಪಡಿತರ ಚೀಟಿಗಳನ್ನ ರದ್ದು ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ಗಂಭಿರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 83 ರೇಷನ್ ಕಾರ್ಡ್ಗಳು ರದ್ದು ಮಾಡಲಾಗಿದೆ. ಒಟ್ಟು 3925 ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ. ಟ್ಯಾಕ್ಸ್ ಪಾವತಿಸುತ್ತಿದ್ದಾರೆ ಎಂಬ ಕಾರಣಕ್ಕೆ 3408 ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ.
1,20,000ಕ್ಕಿಂತ ಹೆಚ್ಚಿನ ಆದಾಯ ಕಾರಣದಿಂದ 415 ಬಿಪಿಎಲ್ ಪಡಿತರ ಕಾರ್ಡ್ಗಳು ಎಪಿಎಲ್ ಕಾರ್ಡ್ಗಳಾಗಿ ಬದಲಾವಣೆ ಮಾಡಲಾಗಿದೆ. ಸರ್ಕಾರಿ ನೌಕರರು ಎಂಬ ಕಾರಣಕ್ಕೆ 102 ಕಾರ್ಡ್ಗಳು ಬದಲಾವಣೆ. ಅದೇ ರೀತಿಯಾಗಿ ಸಾವಿರಾರು ಕಾರ್ಡ್ಗಳು ವಿವಿಧ ತಾಂತ್ರಿಕ ಕಾರಣದಿಂದ ಅಮಾನತು ಮಾಡಲಾಗಿದೆ.
ಕೋಲಾರದಲ್ಲಿ 6500 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 3500 ಕಾರ್ಡ್, ಸರ್ಕಾರಿ ನೌಕರರು ಅಂತ 80 ಕಾರ್ಡ್ ಬಿಪಿಎಲ್ನಿಂದ ಎಪಿಎಲ್ಗೆ ಬದಲಾವಣೆ ಮಾಡಲಾಗಿದೆ.
1, 20,000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಅಂತ 2900 ಪಡಿತರ ಕಾರ್ಡ್ ಪರಿವರ್ತನೆ ಮಾಡಲಾಗಿದೆ. ಜಿಲ್ಲೆಯಲ್ಲಿ 6500 ಕಾರ್ಡುಗಳು ಎಪಿಎಲ್ಗೆ ಕನ್ವರ್ಟ್ ಮಾಡಲು ಗುರುತು ಮಾಡಿ ಅಮಾನತ್ತಿನಲ್ಲಿಡಲಾಗಿದೆ. ಪರಿವರ್ತನೆ ಕಾರ್ಯ ಚಾಲ್ತಿಯಲ್ಲಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಲತಾ ಮಾಹಿತಿ ನೀಡಿದ್ದಾರೆ
ಚಿಕ್ಕಬಳ್ಳಾಪುರದಲ್ಲೂ 2201 ಬಿಪಿಎಲ್ ಕಾರ್ಡ್ಗಳು ಎಪಿಎಲ್ಗೆ ಬದಲಾವಣೆ ಮಾಡಲಾಗಿದೆ. ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ 1992 ಕಾರ್ಡ್ಗಳು ಎಪಿಎಲ್ಗೆ, ಸರ್ಕಾರಿ ನೌಕರರು ಅಂತ 31 ಕಾರ್ಡ್ ಮತ್ತು 1, 20000 ಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದಾರೆ ಅಂತ 178 ಪಡಿತರ ಚೀಟಿ ಬದಲಾವಣೆ ಮಾಡಲಾಗಿದೆ. ಜಿಲ್ಲೆಯಾದ್ಯಾಂತ 2021 ಕಾರ್ಡ್ಗಳು ಎಪಿಎಲ್ಗೆ ಪರಿವರ್ತನೆ ಮಾಡಲಾಗಿದೆ.