ಬೆಂಗಳೂರು:- ರಾಜಧಾನಿ ಬೆಂಗಳೂರಿಗರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿಗೆ ಬಿಬಿಎಂಪಿ ಮುಂದಾಗಿದೆ.
ಕ್ರಿಟಿಕಲ್ ಕೇರ್ ನರ್ಸಿಂಗ್ ಎಕ್ಸಲೆನ್ಸ್” ಕುರಿತ ಕಾರ್ಯಾಗಾರ: ತುರ್ತು ಆರೈಕೆಯಲ್ಲಿ ಶುಶ್ರೂಷಕರಿಗೆ ತರಬೇತಿ ಅತ್ಯಗತ್ಯ
ಮನೆ ಮನೆಯಿಂದ ಕಸ ಸಂಗ್ರಹಿಸಲು ಶುಲ್ಕ ವಸೂಲಿಗೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. 46 ಲಕ್ಷ ಮನೆಗಳಿಂದ 2025 ರಿಂದ ಶುಲ್ಕ ವಸೂಲಿ ಆರಂಭಿಸಲು ಚಿಂತನೆ ನಡೆಸಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. 2025 – 06ನೇ ಆರ್ಥಿಕ ವರ್ಷದಿಂದ ಈ ಮಾದರಿಯ ಶುಲ್ಕ ವಸೂಲಾತಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಹೋಗಿದ್ದು, ಸರ್ಕಾರ ಒಪ್ಪಿಗೆ ನೀಡಿಲ್ಲ
46 ಲಕ್ಷ ಮನೆಗಳಿಂದ ಪ್ರತಿ ತಿಂಗಳು 200 ರಿಂದ 400 ರೂಪಾಯಿ ಶುಲ್ಕ ನಿಗದಿ ಮಾಡುವ ಪ್ರಸ್ತಾವನೆ ಇದಾಗಿದೆ. ಆಸ್ತಿ ತೆರಿಗೆ ಜೊತೆಗೆ ಕಸದ ಶುಲ್ಕವನ್ನ ಸಂಗ್ರಹ ಮಾಡೋದರ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಟೆಂಡರ್ ಕರೆದಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ಟೆಂಡರ್ ಕರೆದಿದೆ.