ಬೆಂಗಳೂರು : sಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶಾಕ್ವೊಂದನ್ನು ಕೊಟ್ಟಿತ್ತು. ಬೆಂಗಳೂರಿನಲ್ಲಿ ಆಸ್ತಿದಾರರು ಶಾಕ್ ಆಗುವಂತಹ ಆದೇಶವೊಂದನ್ನು ಮಾಡಿತ್ತು. ಆದರೆ ಈ ಶಾಕ್ ಎಲ್ಲಾ ಆಸ್ತಿದಾರರಿಗೂ ಅಲ್ಲ ಎನ್ನಲಾಗಿತ್ತು.
ಆದರೆ ಇದೀಗ ಬೆಂಗಳೂರಿನಲ್ಲಿ ಎ- ಖಾತಾ ಇರುವ ಬರೋಬ್ಬರಿ 54,000 ಸಾವಿರ ಆಸ್ತಿದಾರರಿಗೂ ಸಹ ಸಂಕಷ್ಟ ಎದುರಾಗಿದೆ. ಎ- ಖಾತಾ ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡವರು ಸಹ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜೆಡಿಎಸ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಪರಿಷತ್ ಶಾಸಕ ಟಿ.ಶರವಣ ಭಾಗಿ
ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಹೊಸದಾಗಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಆಸ್ತಿಗಳ ಸೇರ್ಪಡೆಯಾಗುತ್ತಿವೆ. ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಸರ್ಕಾರವು ಆಸ್ತಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಯಾವುದೇ ಖಾತಾ ಹೊಂದಿದ್ದರೂ ಕಡ್ಡಾಯವಾಗಿ ಇ – ಖಾತಾ ಮಾಡಿಸಿಕೊಳ್ಳಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅದು ಅಲ್ಲದೆ ಯಾರೆಲ್ಲ ಅಕ್ರಮವಾಗಿ ಎ – ಖಾತಾ ಮಾಡಿಸಿಕೊಂಡಿದ್ದಾರೆ ಎಂದು ಪರಿಶೀಲನೆ ಮಾಡುತ್ತಿದ್ದು, ಇದು ಬೆಂಗಳೂರಿನ ಸಾವಿರಾರು ಜನ ಆಸ್ತಿದಾರರಿಗೆ ನಡುಕವನ್ನುಂಟು ಮಾಡಿದೆ.
ಬೆಂಗಳೂರಿನಲ್ಲಿ ನಿಯಮವನ್ನು ಉಲ್ಲಂಘನೆ ಮಾಡಿರುವ ಹಾಗೂ ಲೈಸೆನ್ಸ್ನಲ್ಲಿ ವ್ಯತ್ಯಾಸವಿರುವುದು ಸೇರಿದಂತೆ ವಿವಿಧ ಆಸ್ತಿಗಳಿಗೆ ಬಿ – ಖಾತಾ ನೀಡಲಾಗಿದೆ. ಆದರೆ ಎ- ಖಾತಾದಲ್ಲಿ ಈ ರೀತಿಯ ಗೊಂದಲಗಳು ಇರುವುದಿಲ್ಲ. ಎ – ಖಾತ ಎಂದರೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗಿರುವ ಆಸ್ತಿಗಳು ಎಂದೇ ಪರಿಗಣಿಸಲಾಗುತ್ತದೆ. ಆದರೆ ಎ ಖಾತಾ ಇರುವವರು ಸಹ ಇದೀಗ ತಲೆ ಬಿಸಿ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಕ್ರಮ ಎ ಖಾತಾ ಇರುವ ಅಂದಾಜು 54,000 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ. ಅಕ್ರಮವಾಗಿ ಎ – ಖಾತಾ ಹೊಂದಿರುವವರ ಮೇಲೆ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಸಂಬಂಧ ಸಹಾಯಕ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದ್ದಾರೆ