ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ರಾಜ್ಯದ ಜನತೆಗೆ ದರ ಏರಿಕೆಯ ಬಿಸಿ ಮುಟ್ಟಿಸುವ ಸಾದ್ಯತೆ ಇದೆ. ಹೌದು ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಬಂದಿದ್ದು, ಸಂಕ್ರಾಂತಿ ಹಬ್ಬದ ಬಳಿಕ ಹಾಲಿನ ದರದ ಪರಿಷ್ಕರಣೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,
ನಿಮಗೆ ಈ ಸಮಸ್ಯೆಗಳಿದ್ಯಾ..? ಹಾಗಾದ್ರೆ ದಿನಕ್ಕೊಂದು ಗೆಣಸು ತಿನ್ನಿ, ಆಮೇಲೆ ಮ್ಯಾಜಿಕ್ ನೋಡಿ!
ಬುಧವಾರ ನಡೆದ ಹಾಲಿನ ಒಕ್ಕೂಟದ ಸಬೆಯಲ್ಲಿ 5 ರೂ. ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ. ಇನ್ನೂ ನಂದಿನಿ ಹಾಲಿನಲ್ಲಿ 50 ಎಂಎಲ್ ಹೆಚ್ಚುವರಿ ನೀಡಿ, 2 ರೂ. ಹೆಚ್ಚಳ ಮಾಡಲಾಗಿತ್ತು. ಈ ಹೆಚ್ಚುವರಿ ಹಾಲು ವಾಪಸ್ಗೆ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
50 ಎಂಎಲ್ ಹಾಲು ಕಡಿತಕ್ಕೆ ಕಾರಣವೇನು?
ಐದು ವರ್ಷದಲ್ಲಿ ಏಕಾಏಕಿ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಹೀಗಾಗಿ ಕೆಎಂಎಫ್ 50 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ 2 ರೂ. ಹೆಚ್ಚು ಮಾಡಿತ್ತು. ಆದರೆ ಈಗ ಹಾಲಿನ ಉತ್ಪಾದನೆ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಹೆಚ್ಚುವರಿ ಹಾಲು 50 ಎಂಎಲ್ನ್ನು ಕಡಿತ ಮಾಡಿ ಈ ಹಿಂದಿನಂತೆ ಸರಬರಾಜು ಮಾಡಲು ನಿರ್ಧಾರ ಮಾಡಲಾಗಿದೆ.
ಇನ್ನೂ ಇಂದಿನಿಂದ ಇಡೀ ಬೆಂಗಳೂರು ನಗರದಲ್ಲಿ ಇಡ್ಲಿ ದೋಸೆ ಹಿಟ್ಟು ನೀಡಿದ್ದೇವೆ. ಖಾಸಗಿಯವರು ದೋಸೆ ಹಿಟ್ಟು/ಇಡ್ಲಿ ಹಿಟ್ಟು ಎಷ್ಟು ಮಾರ್ಕೆಟಿಂಗ್ ಮಾಡ್ತಾರೋ ಅದರ 20% ನಷ್ಟು ನಾವು ನೀಡುತ್ತೇವೆ. ಅಂದರೆ 5 ಸಾವಿರ ಮೆಟ್ರಿಕ್ ಟನ್ ನೀಡಲಿದ್ದೇವೆ. 15-20% ನಷ್ಟು ಸದ್ಯಕ್ಕೆ ನೀಡಲಿದ್ದೇವೆ. ಈಗ ಖಾಸಗಿಯವರು 30 ಸಾವಿರ ಮೆಟ್ರಿಕ್ ಟನ್ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.