ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ವಿರುದ್ಧ ಮುಡಾ ಹಗರಣಕ್ಕೆ ಇದೀಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಈ ಹಗರಣದ ತನಿಖೆ ನಡೆಸಿದ ಮೈಸೂರು ಲೋಕಾಯುಕ್ತ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ವರದಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಕ್ಲೀನ್ಚಿಟ್ ನೀಡಿದೆ.
ಇನ್ನೂ ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಅಶೋಕ್ ಪ್ರತಿಕ್ರಿಯೇ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ಏನು ಇಲ್ಲ ಅಂದ್ರೆ ದುಬಾರಿ ವಕೀಲರನ್ನ ಏಕೆ ಕರೆ ತಂದ್ರಿ? ಹಳ್ಳಿಯ ವಕೀಲರಿಂದ ಕೇಸ್ ಎದುರಿಸಬಹುದಿತ್ತು ಅಲ್ವಾ ? ಇದು ಮುಚ್ಚುಹಾಕುವ ಹುನ್ನಾರ. ಪೊಲೀಸ್ ಅಧಿಕಾರಿಗೆ ವರ್ಗಾವಣೆ, ಪ್ರಮೋಷನ್ ಬೇಕು.
Bima Sakhi Yojana: ಮೋದಿ ಸರ್ಕಾರದಿಂದ ಬಂಫರ್ ಆಫರ್! ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ ರೂ. 7,000
ಅದಕ್ಕೆ ಹೀಗೆ ಮಾಡಿದ್ದಾರೆ. ಸಿಬಿಐ ತನಿಖೆಗೆ ಕೊಟ್ರೆ ಮಾತ್ರ ಸತ್ಯ ಹೊರಗಡೆ ಬರುತ್ತೆ. ಲೋಕಾಯುಕ್ತ ಅಧಿಕಾರಿಗಳು ವರದಿ ನಾಳೆ ಕೊಡ್ತಿದ್ದಾರೆ. ಅವರು ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಾರೆ. ಸಿಎಂ ಸಿದ್ದರಾಮಯ್ಯನವರ ಕುಟುಂಬದವರು ಮುಗ್ಧರು. ಕ್ಲೀನ್ಚೀಟ್ ಅಲ್ಲ, ನಿರ್ಮಾ ಪೌಡರ್ ಹಾಕಿ ತೊಳೆದಿದ್ದಾರೆ ಎಂದು ಕಿಡಿಕಾರಿದರು.
ಇದು ಪೂರ್ವ ನಿಯೋಜಿತವಾದ ವರದಿ. ತಪ್ಪಿಲ್ಲ ಅಂದರೆ 14 ಸೈಟ್ ಯಾಕೆ ವಾಪಸ್ ಕೊಟ್ಟರು? A1, A2, A3 ತಪ್ಪಿಲ್ಲ ಅಂತ ಲೋಕಾಯುಕ್ತ ಹೇಳುತ್ತೆ. ಲೇಔಟ್ ಅಕ್ರಮ, ಅದು ಅವರಿಗೆ ಗೊತ್ತೇ ಇಲ್ಲ ಅಂತಾರೆ. 50:50 ಸೈಟ್ ಬೇಕು ಅಂದಾಗ ಮಾತ್ರ ನೋಡಿದ್ದಾರೆ. ಸಿದ್ದರಾಮಯ್ಯ ಒಂದು ಫೋನ್ ಕಾಲ್ ಕೂಡ ಮಾಡಿಲ್ಲ. ಸಿದ್ದರಾಮಯ್ಯನವರು ಒಂದು ಪತ್ರ ಕೂಡ ಬರೆದಿಲ್ಲ. ಸಿಎಂ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ಳೋಕೆ ಮೂರ್ಖರಾ? ಎಂದರು.