ಕನ್ನಡದ ಬಿಗ್ಬಾಸ್ 100ನೇ ದಿನಕ್ಕೆ ದಿನಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಟಿಕೆಟ್ ಪಡೆಯೋ ಟಾಸ್ಕ್ ಆಗಿರುವುದರಿಂದ ಎಲ್ಲರೂ ಸಾಕಷ್ಟು ಅಗ್ರೆಷನ್ ತೋರಿಸುತ್ತಿದ್ದಾರೆ. ಇಂದಿನ ಟಾಸ್ಕ್ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಸಖತ್ ಟಾಕ್ ವಾರ್ ನಡೆದಿದೆ. ಟಾಸ್ಕ್ನಲ್ಲಿ ತ್ರಿವಿಕ್ರಮ್ ಮುಖ ಮುಖಕ್ಕೆ ಉಗ್ರಂ ಮಂಜು ಹೊಡೆದಿದ್ದಾರೆ.
ಇದಕ್ಕೆ ಕೋಪಗೊಂಡಿರುವ ತ್ರಿವಿಕ್ರಮ್ ಅಷ್ಟು ಜೋರಾಗಿ ಹೊಡೆದರೆ ಹೆಂಗೆ ಎಂದು ಪ್ರಶ್ನೆ ಮಾಡಿದ್ದಲ್ಲದೇ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ನಾನು ಎಲ್ಲಿ ತಳ್ಳಾಡಿದೆ, ಎಲ್ಲಿ ಹೊಡೆದಾಡಿದೆ ಎಂದು ಕೇಳಿದ್ದಾರೆ. ಬಳಿಕ ಟಾಸ್ಕ್ನಲ್ಲಿ ಉಗ್ರಂ ಮಂಜುಗೆ ತ್ರಿವಿಕ್ರಮ್ ಓಡಾಡಿಸಿ ಹೊಡೆದಿದ್ದಾರೆ.
SBI ATM Franchise: ಈ ದಾಖಲೆಗಳು ಇದ್ರೆ ಸಾಕು.. ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಸಂಪಾದಿಸಬಹುದು..!
ಈ ವೇಳೆ ನಿಯಮ ಉಲ್ಲಂಘನೆ ಮಾಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ. ಟಾಸ್ಕ್ನಲ್ಲಿ ಚೆನ್ನಾಗಿ ಆಡದೇ ಇರುವವರು ಫಿನಾಲೆಗೆ ಹೋಗುವ ಆಸೆಯನ್ನು ಕೈಬಿಡಬೇಕು ಆಗುತ್ತದೆ. ಏನೇ ಆಗಲಿ ರಜತ್ ಮನೆಯ ಕ್ಯಾಪ್ಟನ್ ಆದ ಮೇಲೆ ಬಿಗ್ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ಗಳು ವೇಗ ಪಡೆದುಕೊಂಡಿವೆ. ಫಿನಾಲೆಗೆ ಹೋಗುವ ಆಸೆಯಿಂದ ಎಲ್ಲರೂ ಟಾಸ್ಕ್ ಪೂರ್ಣಗೊಳಿಸುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ.