ಬಿಗ್ ಬಾಸ್ ಮನೆಗೆ (Bigg Boss Show) ಬರುವ ಸ್ಪರ್ಧಿಗಳಿಗೆ ಕೆಲವೊಂದು ರೂಲ್ಸ್ ಇದೆ. ಅದರಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತೆ ಇಲ್ಲ. ಸಹಸ್ಪರ್ಧಿಗಳಿಗೆ ಹೊಡೆದ ಸ್ಪರ್ಧಿಗೆ ಸೂಕ್ತ ಕ್ರಮಗೊಳ್ಳಲಾಗುತ್ತದೆ. ಅಂಥ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಲಾಗುತ್ತದೆ. ಬಿಗ್ ಬಾಸ್ ಸೀಸನ್ 17 (Bigg Boss Hindi 17) ಹಿಂದಿ ರಿಯಾಲಿಟಿ ಶೋನಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಅಭಿಷೇಕ್ ಕುಮಾರ್ (Abhishek Kumar) ಮತ್ತು ಸಮರ್ಥ್ ಜ್ಯುರೆಲ್ (Samarth Jurel) ಮಧ್ಯೆ ಬಿಗ್ ಫೈಟ್ ನಡೆದಿದೆ. ಜಗಳ ಅತಿರೇಕಕ್ಕೆ ಹೋಗಿ ಅಭಿಷೇಕ್ ಅವರು ಸಮರ್ಥ್ಗೆ ಹೊಡೆದಿದ್ದಾರೆ. ಈ ಪರಿಣಾಮ, ಮನೆಯಿಂದ ಅಭಿಷೇಕ್ರನ್ನ ಹೊರಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ಮಾತಿನಿಂದ ದೊಡ್ಡ ಮಟ್ಟದ ಜಗಳ ಆದ ಉದಾಹರಣೆ ಇದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್ಗೆ ಹೊಡೆದಿದ್ದಾರೆ. ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ ತೆಗೆದುಕೊಳ್ಳುವಂತೆ ಬಿಗ್ ಬಾಸ್ ಆದೇಶ ನೀಡಿದರು
ಈ ವೇಳೆ, ಕ್ಯಾಪ್ಟನ್ ಆಗಿರೋ ಅಂಕಿತಾ ಅವರು ಅಭಿಷೇಕ್ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಂಕಿತಾ ನಿರ್ಧಾರ ವಿರುದ್ಧ ಅಭಿಯಾನ ಶುರುವಾಗಿದೆ. ಅಭಿಷೇಕ್ರನ್ನು ಎಲಿಮಿನೇಟ್ ಮಾಡುವ ನಿರ್ಧಾರವನ್ನು ಯಾಕೆ ಕೊಟ್ರಿ ಎಂದು ಬಿಗ್ ಬಾಸ್ ಶೋಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ.