ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ವಾರ ಕಳೆದಿದೆ. ಮೊದಲ ವಾರ ಯಾರು ದೊಡ್ಮನೆಯಿಂದ ಹೊರ ಬರುತ್ತಾರೆ ಎಂಬ ಕುತೂಹಲ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದ್ದು ಮೊದಲ ವಾರದ ಎಲಿಮಿನೇಷನ್ ನಲ್ಲಿ ಯಮುನಾ ಶ್ರೀನಿಧಿ ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಮೊದಲ ವಾರವೇ ಯಮುನಾ ಎಲಿಮಿನೇಷನ್ ಆಗುತ್ತಾರೆ ಎಂಬುದನ್ನು ಯಾರು ಊಹಿಸಿರಲಿಲ್ಲ. ವಯಸ್ಸು 45 ದಾಟಿದರೂ ಗಟ್ಟಿಗಿತ್ತಿ ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದರು. ಇದೀಗ ಅವರು ಔಟ್ ಎನ್ನುತ್ತಿದ್ದಂತೆ ಮನೆ ಮಂದಿಗೂ ಅಚ್ಚರಿ ಆಗಿದೆ.
ಇನ್ನೂ ನವರಾತ್ರಿ ಹಬ್ಬದ ಸಂದರ್ಭವಿರುವ ಕಾರಣ, ಎಲಿಮಿನೇಷನ್ ಇರೋದಿಲ್ಲ ಎಂದೇ ಅನೇಕರು ಭಾವಿಸಿದ್ದರು. ಆದರೆ ಈಗ ಯಮುನಾ ಅವರ ದೊಡ್ಮನೆ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ.
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಪರಿಚಿತರಾಗಿದ್ದ ಯಮುನಾ ಆ ನಂತರ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆಯಾಗಿಯೂ ಸೈ ಎನಿಸಿಕೊಂಡಿರುವ ಯಮುನಿ ಸಾಕಷ್ಟು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ.