ಬೆಂಗಳೂರು: ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿ ಆಗುತ್ತಿರೋ ಲಾಯರ್ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ಕಿಡಿಗೇಡಿಗಳು ಲಾಯರ್ ಜಗದೀಶ್ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.
ಲಾಯರ್ ಜಗದೀಶ್ ಅವರಿಗೆ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಜಗದೀಶ್ ಮುಖದಲ್ಲಿ ರಕ್ತ ಸುರಿಯುತ್ತಿದ್ದು, ಕಿಡಿಗೇಡಿಗಳ ವಿರುದ್ಧ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದರು. ಆದ್ರೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಜಗದೀಶ್ ಮತ್ತು ಅವರ ಗನ್ಮ್ಯಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ನಡೆದ ಘಟನೆಯಲ್ಲಿ ಗನ್ಮ್ಯಾನ್ ಕಾನೂನುಬಾಹಿರವಾಗಿ ಗುಂಡು ಹಾರಿಸಿದ್ದಾನೆ. ಉತ್ತರ ಪ್ರದೇಶದಲ್ಲಿ ಮಾತ್ರ ಲೈಸೆನ್ಸ್ ಹೊಂದಿದ್ದ ಶಸ್ತ್ರಾಸ್ತ್ರವನ್ನು ಕರ್ನಾಟಕದಲ್ಲಿ ಬಳಸಿದ್ದಕ್ಕೆ ಬಂಧನವಾಗಿದೆ. ದೂರುದಾರನ ಮೇಲೂ ಹಲ್ಲೆ ಆರೋಪವಿದೆ.
ಹೌದು ನಿನ್ನೆ ನಡೆದ ಗಲಾಟೆಯಲ್ಲಿ ಅವರ ಗನ್ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಕೀಲ ಜಗದೀಶ್ ಮತ್ತು ಅವರ ಗನ್ ಮ್ಯಾನ್ನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.