ಬೀದರ್ : ಬೀದರ್ನಲ್ಲಿ ಎಟಿಎಮ್ ದರೋಡೆ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಸಿಬ್ಬಂದಿ ಶಿವಕುಮಾರ್ ಗುನ್ನಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈದರಾಬಾದ್ನ ಕೇರ್ ಆಸ್ಪತ್ರೆಗೆ ಭೇಟಿ ನೀಡಿದ ಪೌರಾಡಳಿತ ಸಚಿವ ರಹೀಂ ಖಾನ್ ಗಾಯಾಳು ಶಿವಕುಮಾರ್ ಗುನ್ನಳ್ಳಿ ಆರೋಗ್ಯ ವಿಚಾರಿಸಿದರು. ಮನೆಗೆ ಆಧಾರಸ್ತಂಭವಾಗಿದ್ದ ಶಿವಕುಮಾರ್ನೆ ಆಸ್ಪತ್ರೆ ಸೇರಿದ್ದಾನೆಂದು ಗಾಯಾಳು ಶಿವಕುಮಾರ್ ಕುಟುಂಬಸ್ಥರು ಸಚಿವರ ಎದುರು ಅಳಲು ತೋಡಿಕೊಂಡರು. ಸಚಿವ ರಹೀಂ ಖಾನ್ ಶಿವಕುಮಾರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸಚಿವರು ಸಿಎಂ ಜೊತೆ ಮಾತನಾಡಿ ಸರ್ಕಾರದಿಂದ ಪರಿಹಾರ, ಸರ್ಕಾರಿ ನೌಕರಿ ಭರವಸೆ ನೀಡಿದರು. ಕಳೆದ ಜ.16 ರಂದು ಹಾಡಹಗಲೇ ನಡೆದಿದ್ದ ರಾಬರಿ ಪ್ರಕರಣದಲ್ಲಿ ದರೋಡೆಕೋರರ ಗುಂಡೇಟು ತಿಂದು ಶಿವಕುಮಾರ್ ಗುನ್ನಳ್ಳಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದಡೆ ಅಮಿತ್ ಮತ್ತು ಮನೀಶ್ ಪತ್ತೆಗೆ ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ಧವಾಗಿರಲು ಅವರು ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ವಿವಿಧ ರಾಜ್ಯದಲ್ಲಿ ಆರೋಪಿಗಳ ಚಲನವಲನದ ಮೇಲೆ ಕಣ್ಣಿಡಲು ಮುಂದಾಗಿದ್ದು, ಇದಕ್ಕಾಗಿ ತೀವ್ರ ಶೋಧ ನಡೆದಿದೆ.