ಹೂವಿನಹಡಗಲಿ;- ಸರಕಾರ ಮೂರು ಗುಂಪಾಗಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಬರಗಾಲದಿಂದ ಜನತೆ ಸಂಕಷ್ಟದಲ್ಲಿದ್ದು ರಾಜ್ಯ ಸರಕಾರ ಮೂರು ಗುಂಪಾಗಿ ಸಿ.ಎಂ ಕುರ್ಚಿಗಾಗಿ ಕಿತ್ತಾಡುತ್ತಾ ಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದರು.
ರಾಜ್ಯದಲ್ಲಿ ಬರ ತೀವ್ರವಾದ ಹಿನ್ನಲೆಯಲ್ಲಿ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪ್ರತಿ ಹೋಬಳಿ ಮಟ್ಟದಲ್ಲಿಯು ಮೇವು ಬ್ಯಾಂಕ್ ಹಾಗೂ ಗೋಶಾಲೆ ಪ್ರಾರಂಭ ಮಾಡಬೇಕು. ಇಷ್ಟೆಲ್ಲಾ ಇದ್ದಾಗ್ಯೂ ಸಹ ಸಿದ್ದರಾಮಯ್ಯನವರ ಸರಕಾರ ಜನತೆಯನ್ನು ನಿರ್ಲಕ್ಷಿಸಿದೆ.ಕೇಂದ್ರದ ಬರ ತಂಡ ಅಧ್ಯಯನಕ್ಕೆ ಬಂದಾಗ ನಿಜವಾದ ರಾಜ್ಯದ ಪರಿಸ್ಥಿತಿ ತೋರಲು ಸರ್ಕಾರ ವಿಫಲವಾಗಿದೆ.ವಿನಾಃ ಕಾರಣ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾಗುತ್ತರೆ ಎಂದಾದಲ್ಲಿ ನಾನು ಶಾಸಕರ ಬೆಂಬಲ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿ ಸಂಬಂಧ ಎಂದರು.
ನಾವು ರಾಜ್ಯದಲ್ಲಿ ನಮ್ಮ ಪಕ್ಷದಿಂದ ಸುಮಾರು 17 ತಂಡದಲ್ಲಿ ಬರ ಅದ್ಯಾಯನ ಕೈಗೊಂಡು ಮಾಹಿತಿಯನ್ನು ಕೇಂದ್ರಕ್ಕೆ ಕಳಯಹಿಸುತ್ತೇವೆ. ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿಯನ್ನು ಕೇಂದ್ರ ಸರ್ಕಾರ ನಿಲ೮ಕ್ಷ ಮಾಡಿದ್ದಂತೆ ಕಾಣುತ್ತದೆಯಲ್ಲ ಎನ್ಬುವ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಎಲ್ಲೋ ಒಂದು ಕಡೆ ಕೆಲವೊಮ್ಮೆ ಅಂಕಿ ಅಂಶಗಳು ತಪ್ಪಾಗುತ್ತವೆ. ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.