ಬೆಂಗಳೂರು:- ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೈಯಲ್ಲಿರುವುದು ಸಂವಿಧಾನ ಅಲ್ಲ ಬೈಬಲ್ ಇದೆ ಎಂದಿದ್ದ ಅರವಿಂದ್ ಬೆಲ್ಲದ್ ಗೆ X ಮೂಲಕ ಹರಿಪ್ರಸಾದ್ ಟಾಂಗ್ ಕೊಟ್ಟಿದೆ.
ಬಿಜೆಪಿ ಮತ್ತು ಪರಿವಾರ ಸಂವಿಧಾನವನ್ನು ನೋಡದೆ, ಓದದೆ, ಒಪ್ಪದೆ, ಪರಿಪಾಲಿಸದೆ ಸಂವಿಧಾನದ ರಕ್ಷಕರನ್ನು ಹೀಯಾಳಿಸುತ್ತಿದೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ರಾಹುಲ್ ಗಾಂಧಿ ಸಂವಿಧಾನದ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಅವರನ್ನು ಜಾತಿ ಧರ್ಮದಿಂದ ನಿಂದಿಸಬಹುದು ಎಂದ ಭಾವಿಸಿದ್ದರೆ ಬೆಲ್ಲದ್ ಅವರ ಮೂರ್ಖತನ ಎಂದು ಬಿಕೆ ಹರಿಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.
“ಬೆಲ್ಲ” ಸಕ್ಕರೆಗಳಿಗೂ ಪುಡಿಕಾಸಿನ ಬೆಲೆ ಸಿಗಬೇಕಾದರೆ ಸಂವಿಧಾನವೇ ಇರಬೇಕೆಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.