2025ನೇ ಸಾಲಿನ ಐಪಿಎಲ್ ಮೆಗಾ ಹರಾಜಿನ ಮೊದಲ ದಿನವೇ ಭರ್ಜರಿಯಾಗಿ ಸಾಗಿದೆ. ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಇನ್ನೂ ಎರಡನೇ ದಿನದ ಹರಾಜು ಪ್ರಕ್ರಿಯೆಯಲ್ಲಿ RCB ವೇಗಿ ಭುವನೇಶ್ವರ್ ಕುಮಾರ್ ಗೆ 10.75 ಕೋಟಿ ರೂ. ನೀಡಿ ಖರೀದಿಸಿತು.
ಐಪಿಎಲ್ನ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಒಬ್ಬರಾದ ಭುವನೇಶ್ವರ್ 2011 ರಿಂದ ಲೀಗ್ನಲ್ಲಿ ಆಡುತ್ತಿದ್ದಾರೆ. ಅವರು 2011 ರಲ್ಲಿ ಪುಣೆ ವಾರಿಯರ್ಸ್ನೊಂದಿಗೆ ಪಾದಾರ್ಪಣೆ ಮಾಡಿದರು. 2013ರಲ್ಲಿ ಭುವನೇಶ್ವರ್ ಪ್ರಭಾವಿಯಾಗಿ ಆಟವಾಡಿದ್ದರು.. 7ಕ್ಕಿಂತ ಕಡಿಮೆ ಎಕಾನಮಿ ದರವನ್ನು ಕಾಯ್ದುಕೊಂಡು 13 ವಿಕೆಟ್ ಪಡೆದರು. 2014 ರ ಋತುವಿಗೆ ಮುಂಚಿತವಾಗಿ, ಭುವನೇಶ್ವರ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸಹಿ ಹಾಕಿದರು.. ಅಂದಿನಿಂದ ಅವರು SRH ಗಾಗಿ ಆಡುತ್ತಿದ್ದಾರೆ.
ಸೋಮವಾರ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ! ಮಾಡಿದ್ರೆ ಕಷ್ಟ ಬರುತ್ತದೆ!
ಇದೀಗ ಪವರ್ಪ್ಲೇಯಲ್ಲಿ ಉತ್ತಮ ಪ್ರದರ್ಶನ ನೀಡುವ ಕೆಲವೇ ಕೆಲವು ಭಾರತೀಯ ಸೀಮ್ ಮತ್ತು ಸ್ವಿಂಗ್ ಬೌಲರ್ಗಳಲ್ಲಿ ಭುವನೇಶ್ವರ್ ಕುಮಾರ್ ಒಬ್ಬರು. 10 ಕೋಟಿಗಿಂತ ಕಡಿಮೆ ಬೆಲೆಗೆ ಅವರನ್ನು ಖರೀದಿ ಮಾಡಬಹುದು ಎನ್ನಲಾಗಿತ್ತು. ಆದರೆ, ಅನುಭವದ ಆಧಾರದ ಮೇಲೆ ಭುವನೇಶ್ವರ್ ಕುಮಾರ್ ಅವರನ್ನು 10 ಕೋಟಿಗೂ ಹೆಚ್ಚು ನೀಡಿ ಆರ್ಸಿಬಿ ಖರೀದಿಸಿದೆ ಎಂಬುದು ವಿಶೇಷ.