ಭುವನೇಶ್ವರ: ಅಕ್ರಮ ಸಂಬಂಧದ ಶಂಕೆಯ ಮೇಲೆ ಪತ್ನಿಯನ್ನು ಕೊಂದು ಆಕೆಯ ತಲೆಯನ್ನು ಕತ್ತರಿಸಿ, ಅದನ್ನು ಹಿಡಿದುಕೊಂಡೇ ಪತಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಆಘಾತಕಾರಿ ಘಟನೆ ಒಡಿಶಾದ (Odisha) ನಯಾಗಢ (Nayagarh) ಜಿಲ್ಲೆಯಲ್ಲಿ ನಡೆದಿದೆ.
ಬಿಡಪಾಜು ಗ್ರಾಮದ ನಿವಾಸಿ ಅರ್ಜುನ ಬಾಘಾ (35) ಪತ್ನಿ ಧರಿತ್ರಿಯನ್ನು (30) ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇಲೆ ಹತ್ಯೆ ಮಾಡಿದ್ದಾನೆ. ಆಕೆಯನ್ನು ಕ್ರೂರವಾಗಿ ಕೊಂದ ಬಳಿಕ ಹರಿತವಾದ ಆಯುಧ ಬಳಸಿ ಶಿರಚ್ಛೇದನ (Beheading) ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಹಿಡಿದುಕೊಂಡು ನಡೆದೇ ಪೊಲೀಸ್ ಠಾಣೆಗೆ ಹೋಗಿದ್ದಾನೆ. ವ್ಯಕ್ತಿ ದಾರಿಯುದ್ದಕ್ಕೂ ಪತ್ನಿಯ ತಲೆಯನ್ನು ಝಾಡಿಸಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ್ದಾನೆ.
Crispy Nippattu Recipe: ಈ ಚಳಿಗೆ ಬಿಸಿ ಬಿಸಿ ಗರಿ ಗರಿಯಾದ ನಿಪ್ಪಟ್ಟು ಮಾಡಬಹುದು ನೋಡಿ..!
ಪೊಲೀಸ್ ಠಾಣೆಗೆ ಬಂದ ಬಾಘಾ ಪೊಲೀಸರ ಮುಂದೆ ತಾನು ಪತ್ನಿಯನ್ನು ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆ ಕೊಂದಿರುವುದಾಗಿ ತಿಳಿಸಿ ಶರಣಾಗಿದ್ದಾನೆ. ಜೊತೆಗೆ ಪೊಲೀಸ್ ಠಾಣೆ ವರೆಗೂ ಹಿಡಿದುಕೊಂಡೇ ಬಂದಿದ್ದ ಪತ್ನಿಯ ತಲೆಯನ್ನು ತೋರಿಸಿದ್ದಾನೆ. ವ್ಯಕ್ತಿಯ ಅಮಾನವೀಯ ಕೃತ್ಯ ಕಂಡು ಪೊಲೀಸರು ತಬ್ಬಿಬ್ಬಾಗಿದ್ದಾರೆ. ಪತ್ನಿಯನ್ನು ಕ್ರೂರವಾಗಿ ಕೊಂದ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಬಳಿಕ ಬಾಘಾ ಪತ್ನಿಯ ತಲೆ ಇಲ್ಲದ ಮುಂಡವನ್ನೂ ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.