ನೆಲಮಂಗಲ:- ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದ ಪ್ರಮುಖ ಸಾಕ್ಷಿಗಳೇ ಕಳವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೃಹಿಣಿಯರೇ ನೀವು ಪ್ರೆಗ್ನೆಂಟ್ ಆದ್ರೆ 3 ತಿಂಗಳು ಯಾರಿಗೂ ಹೇಳ್ಬೇಡಿ! ಯಾಕೆ ಗೊತ್ತಾ?
ಪ್ರಕರಣದ ತನಿಖೆಯುನ್ನು ಅಪರಾಧ ತನಿಖಾ ಇಲಾಖೆ ನಡೆಸುತ್ತಿದೆ. ಆದರೆ, ಅವ್ಯವಹಾರಕ್ಕೆ ಸಂಬಂಧಿಸಿದ್ದ ಸಾಕ್ಷ್ಯಗಳು ಇದ್ದ ಮೊಬೈಲ್ ಕಳ್ಳತನವಾಗಿದೆ.
ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕ ಸಿಪಿ ಶಿವಸ್ವಾಮಿ ಡಿಸೆಂಬರ್ 27 ರಂದು ಸಂಜೆ 5.30ರ ಸುಮಾರಿಗೆ ಚನ್ನರಾಯಪಟ್ಟಣಕ್ಕೆ ತೆರಳಲು ನೆಲಮಂಗಲದ ಕುಣಿಗಲ್ ಸರ್ಕಲ್ನಲ್ಲಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಶಿವಸ್ವಾಮಿ ಜೇಬಿನಲ್ಲಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ 5ಜಿ ಮೊಬೈಲ್ ಅನ್ನು ಕದ್ದಿದ್ದಾರೆ. ಕಳ್ಳರು ಮೊಬೈಲ್ ಕಳುವು ಮಾಡಿ, ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಸಿಪಿ ಶಿವಸ್ವಾಮಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಲೋಕಾಯುಕ್ತ ಮತ್ತು ಸಿಐಡಿ ತನಿಖೆ ನಡೆಸುತ್ತಿವೆ. ತನಿಖೆಗೆ ಹಾಗೂ ನಿಗಮಕ್ಕೆ ಸಂಬಂಧಿಸಿದ ಪ್ರಮುಖ ದಾಖಲಾತಿಗಳು ಮೊಬೈಲ್ನಲ್ಲಿ ಇವೆ. ಈ ದಾಖಲಾತಿಗಳನ್ನು ಉದ್ದೇಶಪೂರ್ವಕವಾಗಿ ಕಳ್ಳತನ ಮಾಡಿರುವ ಅನುಮಾನವಿದೆ” ಎಂದು ದೂರು ನೀಡಿದ್ದಾರೆ.