ಬಾಬಾ ವಂಗಾ ಬಗ್ಗೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿರಬಹುದು. ಬಲ್ಗೇರಿಯಾ ದೇಶದ ಈ ಪ್ರಸಿದ್ಧ ಕಾಲಜ್ಞಾನಿಗೆ ಜಗತ್ತಿನಾದ್ಯಂತ ಹೆಸರಿದೆ. 1911ರಲ್ಲಿ ಹುಟ್ಟಿದ ಅವರು ಬದುಕಿದ್ದ ಸಮಯದಲ್ಲಿ ಎಷ್ಟೋ ವಿಷಯಗಳನ್ನು ತಿಳಿಸಿದ್ದಾರೆ. ಭವಿಷ್ಯದಲ್ಲಿ ಏನು ನಡೆಯಲಿವೆ ಅನ್ನೋ ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಇದರ ಪ್ರಕಾರ 2025ರಲ್ಲಿ ಭಾರತದಲ್ಲಿ ಭಾರಿ ವಿನಾಶ ಆಗುವ ಸಾಧ್ಯತೆ ಇದೆ ಅಂತ ಅವರು ಹೇಳಿದ್ದಾರೆ.
ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ರಾಜಧಾನಿಯಲ್ಲಿ ಹೊಸ ರೂಲ್ಸ್!
ಭವಿಷ್ಯ ನುಡಿಯುವಲ್ಲಿ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಹೇಳಿರುವ 2024ರಲ್ಲಿನ ಭವಿಷ್ಯವಾಣಿಯಲ್ಲಿ ಎರಡು ಸತ್ಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಹಿಂದೆ ಬಾಬಾ ವಂಗಾ ಹೇಳಿರುವ ಎಷ್ಟೋ ಮಾತುಗಳು ನಿಜವಾಗಿದೆ ಎಂದು ಅನೇಕರು ಹೇಳಿದ್ದಾರೆ. ಇನ್ನು ಬಾಬಾ ವಂಗಾ 2025ರಲ್ಲಿ ಕೆಲವೊಂದು ಘಟನೆಗಳು ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಭವಿಷ್ಯವಾಣಿಗಳು ಈಗಾಗಲೇ ನಿಜವಾಗುತ್ತಿದೆ.
ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ ದಶಕಗಳ ಹಿಂದೆಯೇ ಅನೇಕ ಘಟನೆಗಳನ್ನು ಭವಿಷ್ಯ ನುಡಿದಿದ್ದರು. ಅವರ ಅನೇಕ ಹೇಳಿಕೆಗಳು ಇಲ್ಲಿಯವರೆಗೆ ಸತ್ಯವಾಗಿದೆ ಎಂದು ಸಾಬೀತಾಗಿದೆ. ಅವರು 2025 ರ ವರ್ಷದಲ್ಲಿ ಕೆಲವು ಭಯಾನಕ ಭವಿಷ್ಯವಾಣಿಗಳನ್ನು ಸಹ ನುಡಿದಿದ್ದರು. ಕಳೆದ ಕೆಲವು ದಿನಗಳಿಂದ ಭಾರತ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿ ಬಾಬಾ ವಂಗಾ ಭವಿಷ್ಯಗಳು ಮತ್ತೆ ಸದ್ದು ಮಾಡುತ್ತಿದೆ.
2025 ರಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ವಿನಾಶಕಾರಿ ಭೂಕಂಪಗಳು ಸಂಭವಿಸುತ್ತವೆ ಎಂದು ಬಾಬಾ ವಂಗಾ ಹಲವು ವರ್ಷಗಳ ಹಿಂದೆಯೇ ಹೇಳಿದ್ದರು. ಇದರಿಂದಾಗಿ, ದೊಡ್ಡ ಪ್ರಮಾಣದಲ್ಲಿ ವಿನಾಶ ಸಂಭವಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಕಳೆದ ಕೆಲವು ದಿನಗಳಲ್ಲಿ ಅಮೆರಿಕದಿಂದ ಏಷ್ಯಾ ಖಂಡದವರೆಗೆ ಬಹಳಷ್ಟು ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಇನ್ನು ಭಾರತದಲ್ಲಿಯೂ ದೆಹಲಿಯಿಂದ ಬಿಹಾರ ಮತ್ತು ಬಂಗಾಳದವರೆಗೆ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ಇದೀಗ ಈ ಎಲ್ಲಾ ದುರಂತಗಳನ್ನು ನೋಡುವಾಗ ಇದೀಗ ಬಾಬಾ ವಂಗಾ ಭವಿಷ್ಯ ನಿಜವಾಗುತ್ತಾ ಎಂಬ ಭಯ ಜನರಲ್ಲೂ ಕಾಡುತ್ತಿದೆ
ವಾಸ್ತವವಾಗಿ, ಬಾಬಾ ವಂಗಾ, 2025 ರಲ್ಲಿ ವಿಶ್ವದ ಅನೇಕ ದೇಶಗಳು ವಿನಾಶಕಾರಿ ಭೂಕಂಪಗಳನ್ನು ಎದುರಿಸುತ್ತವೆ ಎಂದು ಭವಿಷ್ಯ ನುಡಿದಿದ್ದರು. ಈ ಪರಿಣಾಮ ಹಲವೆಡೆ ವಿನಾಶ ಉಂಟಾಗಲಿದೆ ಎಂದು ಹೇಳಿದ್ದರು. ಅಲ್ಲದೇ ಈ ಪ್ರಾಕೃತಿಕ ವಿಕೋಪದಿಂದಾಗಿ ಅಪಾರ ಜೀವ ಮತ್ತು ಆಸ್ತಿ ನಷ್ಟವನ್ನು ಸಹ ಊಹಿಸಿದ್ದರು.
ಈ ಎಲ್ಲಾ ಭವಿಷ್ಯವಾಣಿಗಳನ್ನು ನೋಡುವಾಗ ಇದೀಗ ಬಾಬಾ ವಂಗಾ ಭವಿಷ್ಯ ನಿಜವಾಗ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಒಂದೆಡೆ ಭಯವೂ ಆವರಿಸಿದೆ. ಜನವರಿಯಿಂದ ಇಲ್ಲಿಯವರೆಗೆ, ಭಾರತದ ಹಲವು ಭಾಗಗಳಲ್ಲಿ ವಿವಿಧ ಸಮಯಗಳಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಸಹ, ಈ ವರ್ಷ ಭೂಮಿಯು ಹಲವಾರು ಬಾರಿ ಕಂಪಿಸಿದೆ. ಇದಲ್ಲದೆ, ಬಿಹಾರದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂವರೆಗೆ ಭೂಕಂಪನ ಸಂಭವಿಸಿದೆ ಎಂದು ಹೇಳಲಾಗಿತ್ತು. ಇದಲ್ಲದೆ, ಏಷ್ಯಾ, ಅಮೆರಿಕ ಮತ್ತು ಇತರ ಖಂಡಗಳ ವಿವಿಧ ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.