ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗಿಯಾಗಿ ಕೊನೆಯವರೆಗೂ ಇದ್ದರ ಭವ್ಯಾ ಗೌಡ ದೊಡ್ಮನೆಯಿಂದ ಹೊರ ಬಂದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಭವ್ಯಾ ಗೌಡಗೆ ಅಭಿಮಾನಿಗಳ ಸಂಖ್ಯೆಗೆ ಹೆಚ್ಚಾಗಿದ್ದು ಇದೀಗ ಭವ್ಯಾ ಮನೆಗೆ ಅಭಿಮಾನಿಗಳು ಸಪ್ರೈಸ್ ಗಿಫ್ಟ್ ಕಳುಹಿಸಿದ್ದಾರೆ.
ಭವ್ಯಾ ಗೌಡ ದೊಡ್ಮನೆಯಲ್ಲಿ ಕೊನೆಯವರೆಗೂ ಇದ್ದರು. ಗೀತಾ ಸೀರಿಯಲ್ ಮೂಲಕ ಖ್ಯಾತಿ ಘಳಿಸಿದ್ದ ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ಖ್ಯಾತಿ ಘಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ ಅವರಿಗೆ ಅಭಿಮಾನಿಗಳಿಂದ ಬರಪೂರ ಪ್ರೀತಿ ಸಿಕ್ಕಿದೆ ಮೊದಲ ಸ್ಪರ್ಧಿಯಾಗಿ ಬಿಗ್ ಮನೆಗೆ ಹೋಗಿದ್ದ ಭವ್ಯಾ ಗೌಡ 118ನೇ ದಿನಕ್ಕೆ ಆಚೆ ಬಂದಿದ್ದರು.
ಬಿಗ್ಬಾಸ್ ಮನೆಯಲ್ಲಿದ್ದ ಅಷ್ಟು ದಿನ ಎಲ್ಲರಿಂದಲೂ ಸ್ಟ್ರಾಂಗ್ ಸ್ಪರ್ಧಿ ಅಂತ ಅನೀಸಿಕೊಂಡಿದ್ದರು. ಸದ್ಯ ಬಿಗ್ಬಾಸ್ನಿಂದ ಆಚೆ ಬಂದ ಭವ್ಯಾ ಗೌಡಗೆ ಅಭಿಮಾನಿಗಳು ಗಿಫ್ಟ್ವೊಂದನ್ನು ಕಳುಹಿಸಿದ್ದಾರೆ. ಭವ್ಯಾ ಗೌಡ ಮನೆಗೆ ಅಭಿಮಾನಿಗಳು ದೊಡ್ಡ ಫೋಟೋ ಫ್ರೇಮ್ವೊಂದನ್ನು ಕೊಟ್ಟಿದ್ದಾರೆ. ಇದನ್ನು ನೋಡಿದ ಭವ್ಯಾ ಗೌಡ ಅವರು ಫುಲ್ ಖುಷ್ ಆಗಿದ್ದಾರೆ. ಮನೆಯ ತನಕ ಬಂದು ಫೋಟೋ ಫ್ರೇಮ್ ಕೊಟ್ಟಿದ್ದೀರಿ ಥ್ಯಾಂಕ್ಯೂ ಸೋ ಮಚ್. ನೀವು ಬಂದಾಗ ನಾನು ಮನೆಯಲ್ಲಿ ಇರಲಿಲ್ಲ ಅದಕ್ಕೆ ಕ್ಷಮಿಸಿ. ಆದಷ್ಟು ಬೇಗ ನಿಮ್ಮ ಜೊತೆಗೆ ನಾನು ಮಾತಾಡುತ್ತೇನೆ ಎಂದು ಭವ್ಯಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.