ದೆಹಲಿ: ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ (BharatPe Fraud Case) ಸಂಬಂಧಿಸಿದಂತೆ ಭಾರತ್ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ (Ashneer Grover) ಅವರ ಕುಟುಂಬದ ಸದಸ್ಯ ದೀಪಕ್ ಗುಪ್ತಾ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ.
ಶೀಘ್ರದಲ್ಲೇ UPI ಪಾವತಿಯಲ್ಲಿ ದೊಡ್ಡ ಬದಲಾವಣೆ: ಏನಿದು ಅಂತಾ ಕುತೂಹಲವೇ ಇಲ್ಲಿದೆ
ಈ ಪ್ರಕರಣದಲ್ಲಿ ಆರೋಪಿ ದೀಪಕ್ ಗುಪ್ತಾನನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಪ್ರಕರಣ ನಡೆಯುವ ವೇಳೆ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇಒಡಬ್ಲ್ಯೂ ಉಪ ಪೊಲೀಸ್ ಆಯುಕ್ತ ರಾಜಾ ಬಂಥಿಯಾ ಹೇಳಿದ್ದಾರೆ.
ಮೇ 2023 ರಲ್ಲಿ ಅಶ್ನೀರ್ ಗ್ರೋವರ್, ಅವರ ಪತ್ನಿ ಮಾಧುರಿ ಜೈನ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ದಾಖಲಿಸಲಾದ ಎಫ್ಐಆರ್ನಲ್ಲಿ ಮಾಧುರಿಯವರ ಸಹೋದರಿಯ ಪತಿ ದೀಪಕ್ ಗುಪ್ತಾ ಅವರನ್ನು ಹೆಸರಿಸಲಾಗಿತ್ತು.
ಇದಕ್ಕೂ ಮುನ್ನ ಈ ಪ್ರಕರಣದ ಮತ್ತೊಬ್ಬ ಆರೋಪಿ ಅಮಿತ್ ಬನ್ಸಾಲ್ ಅವರನ್ನೂ ಇಒಡಬ್ಲ್ಯು ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಪ್ತಾ ಭಾಗಿಯಾಗಿರುವುದು ಆರೋಪಿ ಅಮಿತ್ ಬನ್ಸಾಲ್ ವಿಚಾರಣೆಯಿಂದ ದೃಢವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.