ಬೆಂಗಳೂರು: ಪ್ರಯೋಗಶೀಲತೆಗೆ ಹೆಸರಾದ ಅನೇಕಾ ರಂಗತಂಡವು ಹಲವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ತನ್ನ ನಾಟಕಗಳನ್ನು ಪ್ರದರ್ಶಿಸಿ ಪ್ರಶಂಸೆಗಳಿಸಿದೆ. ಸುರೇಶ್ ಆನಗಳ್ಳಿ ನಿರ್ದೇಶನ ಹಾಗೂ ಪರಿಕಲ್ಪನೆಯ ಮತ್ತು ಪ್ರಸಿದ್ಧ ಬರಹಗಾರ ಕೆ.ಟಿ.ಗಟ್ಟಿಯವರ ಬಾನುಲಿ ನಾಟಕವೊಂದನ್ನು ಆಧರಿಸಿ ಸಮಕಾಲೀನ ವಿದ್ಯಮಾನಗಳಿಗೆ ಹೊಂದುವಂತೆ ಮರು ರಚಿಸಿಕೊಂಡ ನಾಟಕ -” ಅಂಗವಿರದ ದೇಹದಲ್ಲಿ ಭಂಗೀಹುಳ!”
ಈ ನಾಟಕದಲ್ಲಿ ಕೆಮಿಸ್ಟ್ರಿ ಪ್ರೊಫೆಸರನೊಬ್ಬನ ಪ್ರಯೋಗಶಾಲೆಯಲ್ಲಿ ಅಕಸ್ಮಾತ್ತಾಗಿ ಹುಟ್ಟಿಕೊಂಡ ವಿಚಿತ್ರ ಮೃಗವೊಂದು. ಅಂಗಾಂಗ ಕಳೆದುಕೊಂಡ ಜನಸಾಮಾನ್ಯ ವ್ಯಕ್ತಿಯೊಬ್ಬನ ದೇಹದೊಳಕ್ಕೆ ಪ್ರವೇಶ ಮಾಡುತ್ತದೆ. ತನ್ನ ಸ್ವಾರ್ಥ ಸಾಧನೆಗಾಗಿ ಇಡೀ ವ್ಯವಸ್ಥೆಯನ್ನು ಅಮಾನವೀಯ ಗೊಳಿಸುವುದೇ ಅಂಗವಿರದ ದೇಹದಲ್ಲಿ ಭಂಗೀಹುಳ ಈ ನಾಟಕದಲ್ಲಿ ವೈಜ್ಞಾನಿಕ ಆವಿಷ್ಕಾರಗಳ ನಿರರ್ಥಕತೆ ಪರಿಸರ ನಾಶ,
ಸರ್ವಾಧಿಕಾರಿ ಹುನ್ನಾರಗಳು, ಹುಸಿ ಧರ್ಮರಾಜಕಾರಣ, ಸ್ತ್ರೀ ದೌರ್ಜನ್ಯಗಳು ಇತ್ಯಾದಿ ಹಲವು ಸ್ಥರಗಳಲ್ಲಿ ನಡೆಯುವ ಸಾಮಾಜಿಕ ವಿದ್ಯಮಾನಗಳ ಸಂಕೀರ್ಣ ಚಲನೆಯನ್ನು ರೂಪುಗೊಳಿಸಲು ಪ್ರಯತ್ನಿಸುತ್ತದೆ.
ಇದೊಂದು ಅಕರಾಳ-ವಿಕರಾಳ ಪ್ರದರ್ಶನ ಶೈಲಿಯ ನಾಟಕವಾಗಿದೆ. ಹೊರನೋಟಕ್ಕೆ ಸುಸಂಬದ್ಧವಾಗಿ ಗೋಚರಿಸುವ ಮನುಷ್ಯನ ನಡವಳಿಕೆಯ ಹಿಂದೆ ಬೆಚ್ಚಿಬೀಳಿಸುವ ಅತಾರ್ಕಿಕ ಕ್ರೌರ್ಯ ಹೊಂದಿದೆ.
ಸುರೇಶ್ ಆನಗಳ್ಳಿ ನಿರ್ದೇಶನ ಹಾಗೂ ಪರಿಕಲ್ಪನೆಯ, ಕೆ.ಟಿ.ಗಟ್ಟಿಯವರ ಬಾನುಲಿ ನಾಟಕ “ಅಂಗವಿರದ ದೇಹದಲ್ಲಿ ಭಂಗೀಹುಳ” 2024ರ ಡಿಸೆಂಬರ್ 20 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಅತ್ಯುತ್ತಮ ಪ್ರದರ್ಶನ ಕಂಡಿದೆ.
ಅನೇಕ ತಂಡದಿಂದ ಈ ನಾಟಕವನ್ನು ಕಲಾಗ್ರಾಮದಲ್ಲಿ ಆಯೋಜಿಸಲಾಗಿತ್ತು. ಅಂಗವಿರದ ದೇಹದಲ್ಲಿ ಭಂಗೀಹುಳ ಇದೊಂದು ಅಕರಾಳ-ವಿಕರಾಳ ಪ್ರದರ್ಶನ ಶೈಲಿಯ ನಾಟಕವಾಗಿದೆ. ಈ ನಾಟಕವು ಮತ್ತೆ 11ನೇ ತಾರೀಖಿನಂದು ಹೊಸಕೋಟೆಯಲ್ಲಿ ಪ್ರದರ್ಶನಗೊಳ್ಳುತ್ತಿದೆ.