ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಉದ್ಭವ ಮೂರ್ತಿ ಶ್ರೀ ಮಾರುತೇಶ್ವರನ ಕಾರ್ತಿಕೋತ್ಸ ನಿಮಿತ್ಯ ರಾತ್ರಿಯಿಂದಲೇ ಭಕ್ತ ಸಾಗರ ಹರಿದು ಬರುತ್ತಿದೆ. ಕಾರ್ತಿಕೋತ್ಸವ ನಿಮಿತ್ಯ ಇಂದು ಮುಂಜಾನೆ ಶ್ರೀ ಮಾರುತೇಶ್ವರನಿಗೆ ರುದ್ರಾಭಿಷೇಕದ ವಿಶೇಷ ಪೂಜೆ ನೆರೆವೆರಿತು.
ಭಕ್ತರು ರಾತ್ರಿ 1 ಗಂಟೆಯಿಂದಲೆ ದೀಡ ನಮಸ್ಕಾರ ಹಾಕುವ ಮೂಲಕ ಶ್ರೀ ಮಾರುತೇಶ್ವರನಿಗೆ ಹರಕೆ ಸಲ್ಲಿಸುತ್ತಿರುವುದು ವಿಶೇಷ..ಬಂಡಿಗಣಿಯ ಮಠದ ವತಿಯಿಂದ ದೇವಸ್ಥಾಕ್ಕೆ ಬರುವ ಎಲ್ಲ ಭಕ್ತಾದಿಗಳಿಗೆ ಶ್ರೀ ಚಕ್ರವರ್ತಿ ಅನ್ನ ದಾನೇಶ್ವರ ಸ್ವಾಮೀಜಿಯವರು ಅನ್ನ ಪ್ರಸಾದದ ವ್ಯವಸ್ಥೆ ಮಾಡಿಸಿದ್ದಾರೆ. ಇಂದು ಸಾಂಯಕಾಲ ದೀಪೋತ್ಸವ ಹಾಗೂ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಜರುಗಲಿದೆ
ಪ್ರಕಾಶ ಕುಂಬಾರ
ಬಾಗಲಕೋಟೆ