ಹುಬ್ಬಳ್ಳಿ : ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆ 800 ಮೂತ್ರಪಿಂಡ ಕಸಿಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ವೈದ್ಯಕೀಯ ಶ್ರೇಷ್ಠತೆಗೆ ಮತ್ತು ಚಿನ್ನದಮಾನದಂಡಕ್ಕೆ ಪಾತ್ರವಾಗಿದೆ. ಈ ಕುರಿತು ಸೋಮವಾರ ನಗರದಲ್ಲಿ ಮಾಹಿತಿ ನೀಡಿದ ಆಸ್ಪತ್ರೆ ವೈದ್ಯರು
ಮೂತ್ರಪಿಂಡ ತಜ್ಞ ಡಾ.ಅನಿಲ್ ಕುಮಾರ್ ಬಿ.ಟಿ., ಮೂತ್ರಶಾಸ್ತ್ರ ಜ್ಞ ಡಾ.ನರೇಂದ್ರಎಸ್. ಅವರ ದೂರದೃಷ್ಟಿಯ ನಾಯಕತ್ವದಡಿ ಅತ್ಯಾಧುನಿಕ ಚಿಕಿತ್ಸೆ ಜೊತೆಗೆ ಮೂತ್ರಪಿಂಡ ಕಸಿಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಲಭ್ಯವಿರುವ ಸುಧಾರಿತಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ದೊಡ್ಡಜಿಗಿತ ಸಾಧಿಸಿದೆ ಎಂದರು.
ಕಸಿಶಾಸ್ತ್ರ ಮತ್ತು ಮೂತ್ರಪಿಂಡ ತಜ್ಞ ಅನಿಲ್ ಕುಮಾರ್ ಬಿ ಟಿ, ಮಾತನಾಡಿ, ರೋಗಿ ಕೇಂದ್ರಿತ ಆರೈಕೆ ಪ್ರಮುಖವಾಗಿದ್ದು,ವೈಯಕ್ತಿಕ ಚಿಕಿತ್ಸೆಯಿಂದ ಹಿಡಿದು ಶಸ್ತ್ರಚಿಕಿತ್ಸೆ ನಂತರದವರೆಗೆ ನಮ್ಮರೋಗಿಗಳ ಯೋಗ ಕ್ಷೇಮಕ್ಕೆ ಒತ್ತು ನೀಡಲಾಗಿದೆ.ಇದು ಕೇವಲ ಕಸಿಯಲ್ಲ. ಬದಲಿಗೆ ಬದುಕಿನಲ್ಲಿ ಸಹಾನುಭೂತಿ ಮತ್ತು ಪರಿವರ್ತನೆಗೆ ಕಾರಣವಾಗಿದೆ ಎಂದರು. ಮೂತ್ರಶಾಸ್ತ್ರಜ್ಞ ಡಾ.ನರೇಂದ್ರ ಎಸ್. ಮಾತನಾಡಿ,” ಶಸ್ತ್ರಚಿಕಿತ್ಸಾ ಪರಿಣತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪರಿಪೂರ್ಣಸಾಮರಸ್ಯದಿಂದ ಈ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ನಾವು ಅತ್ಯಾಧುನಿಕ ಅಂದರೆ ಅಸಾಧಾರಣ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ. ನಾವು ವೈದ್ಯಕೀಯ ನಾವೀನ್ಯತೆಯಲ್ಲಿ ಮಂಚೂಣಿಯಲ್ಲಿದ್ದು, ನಮ್ಮ ರೋಗಿಗಳು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.
ಬೆಂಗಳೂರಿ ನಗ್ಲೆನಿಗಲ್ಸ್ ಆಸ್ಪತ್ರೆಯ ಸಿಒಒ ಬಿಜುನಾಯರ್ ಮಾತನಾಡಿ, ಚಿಕಿತ್ಸೆಯಲ್ಲಿ ಅಸಾಧಾರಣ ಕ್ರಮಗಳನ್ನು ಅನುಸರಿಸಿದ ಕಾರಣ ಉತ್ತಮ ಫಲಿತಾಂಶ ಬಂದಿದೆ ಎಂದರು.
ರೋಗಿಗಳನ್ನುಆರೋಗ್ಯ ಕೇಂದ್ರದಲ್ಲಿ ಇರಿಸುವ ಮೂಲಕ ಆಸ್ಪತ್ರೆಯು ಅಚಲಬದ್ಧತೆ ಹೊಂದಿದ್ದು, ಇದು ವೈಯಕ್ತಿಕ ಮತ್ತು ಸಹಾನುಭೂತಿ ಆರೈಕೆಯನ್ನು ಖಚಿತಪಡಿಸಿದೆ. ಸಾಧ್ಯವಾದಷ್ಟು ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ, ಪರಿಣಿತರ ತಂಡ ಹೊಂದಿದೆ, ಪಾರದರ್ಶಕತೆ ಮತ್ತು ನಂಬಿಕೆ ಜೊತೆಗೆ ಯೋಗಕ್ಷೇಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆ ರಾಜ್ಯ ಸರ್ಕಾರ, ಜೀವ ಸಾರ್ಥಕತೆ ಸಂಸ್ಥೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಸಚಿವಾಲಯಕ್ಕೆ ಸೂಕ್ತ ರೀತಿಯಲ್ಲಿ ಬೆಂಬಲ ನೀಡುತ್ತಿದೆ ಎಂದರು.