ಒಂದೆಡೆ ದೇಶದ ಜನ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದಾರೆ. ಮತ್ತೊಂದೆಡೆ ಕೆಲವು ವಂಚಕರು ನಿಮ್ಮ ಮೇಲೆ ಕಣ್ಣಿಟ್ಟಿರಬಹುದು ಹುಷಾರ್.
ಜಮ್ಮು-ಕಾಶ್ಮೀರ ಪೂಂಚ್ನಲ್ಲಿ ಕೊಡಗಿನ ಯೋಧ ಸಾವು: ಇಂದು ದಿವೀನ್ ಅಂತ್ಯಕ್ರಿಯೆ!
ಹೊಸ ವರ್ಷದ ಸಂದೇಶದೊಂದಿಗೆ ವಂಚಕರು ನಿಮ್ಮನ್ನು ಬಲಿಪಶು ಮಾಡಲು ಹೊಂಚು ಹಾಕಿರಬಹುದು. ಯಾವುದೋ ಅಪರಿಚಿತ, ಪರಿಚಿತರ ಸೋಗಿನಲ್ಲಿ ನಿಮಗೆ ಬರುವ ಮೆಸೇಜ್ಗಳ ಮೇಲೆ ಕ್ಲಿಕ್ ಮಾಡುವಾಗ ಒಮ್ಮೆ ಯೋಚಿಸಿ. ಯಾಕೆಂದರೆ ಒಂದು ಸಣ್ಣ ಕ್ಲಿಕ್ನಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವೇ ಖಾಲಿ ಆಗಬಹುದು ಎಚ್ಚರ ಇರಲಿ.
ಇರಲಿ ಎಚ್ಚರಿಕೆ..!
ಅನುಮಾನಾಸ್ಪದ ಸಂಖ್ಯೆಯಿಂದ ಬರುವ ಯಾವುದೇ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
ಯಾವುದಾದರು ಉಡುಗೊರೆ, ಉಚಿತ ಸೇವೆಯ ಆಮಿಷದ ಲಿಂಕ್ ಬಂದ್ರೆ ಹುಷಾರ್
ಅಪರಿಚಿತರು ಕರೆ ಮಾಡಿ ಲಾಟರಿ ಅಥವಾ ಗಿಫ್ಟ್ ಗೆಲ್ಲುವಂತೆ ಪ್ರಚೋದಿಸಿದರೆ ಎಚ್ಚರದಿಂದಿರಿ
ಕ್ಯೂಆರ್ ಕೋಡ್ ಮೂಲಕವೂ ವಂಚನೆ ನಡೆಯುತ್ತಿದೆ ಜಾಗೃತರಾಗಿ
ಅಪರಿಚಿತ ವ್ಯಕ್ತಿಗಳೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ
ಕೆಲವರು ಹೊಸ ವರ್ಷದ ಶುಭಾಶಯ ಎಂದು ವಿಡಿಯೋ ಇತ್ಯಾದಿಗಳನ್ನು ಶೇರ್ ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದಾಳಿಕೋರರು ಸಂದೇಶದ ಜೊತೆಗೆ ಮಾಲ್ವೇರ್ ಹೊಂದಿರುವ ಫೈಲ್ ಲಗತ್ತಿಸಿ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಎಚ್ಚರದಿಂದಿರಿ!