ಬೆಂಗಳೂರು: ಕಂಪನಿ ಷೇರುಗಳನ್ನು ನೀಡುವ ಹೆಸರಲ್ಲಿ ವಂಚನೆ ಮಾಡುತ್ತಿರುವ ಖತರ್ನಾಕ್ ಜಾಲವೊಂದು ಈಗ ಬೆಳಕಿಗೆ ಬಂದಿದ್ದು ಬೆಂಗಳೂರಿನ ಖ್ಯಾತ ಉದ್ಯಮಿ ಹರಿಪಾಲ್ ಸಿಂಗ್ ಉಬೇರಾಯ್ ರಿಗೆ ವಂಚನೆ ಮಾಡಲಾಗಿದೆ.
ಬರೋಬ್ಬರಿ 6 ಕೋಟಿ 1 ಲಕ್ಷಕ್ಕೂ ಅಧಿಕ ಹಣ ವಂಚಿಸಿರೋ ಆರೋಪ ಕೇಳಿ ಬಂದಿದ್ದು ಹರಿಪಾಲ್ ಸಿಂಗ್ ಉಬೇರಾಯ್ ರಿಂದ ಬೆಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಾಹನ ಸವಾರರೇ ಇಲ್ಲಿ ಕೇಳಿ – ಆ್ಯಂಬುಲೆನ್ಸ್ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಗಾಡಿ ಓಡಿಸಿದ್ರೆ ಬೀಳುತ್ತೆ ದಂಡ!
ಹರಿಪಾಲ್ ಸಿಂಗ್ ರಿಗೆ ಫೇಸ್ಬುಕ್ ನಲ್ಲಿ ಗೋಲ್ಡ್ಸ್ ಮೆನ್ ಸಾಚಸ್ ಈಕ್ವಿಟಿ ಅಸೆಟ್ ಮ್ಯಾನೆಜ್ಮೆಂಟ್ ಗ್ರೂಪ್ 109 ಹಾಗೂ ಸ್ಕೈರಿಮ್ ಕ್ಯಾಪಿಟಲ್ ಇಮಿಲಿ ಕುನಾಲ್ ಕಂಪನಿಗಳ ಪರಿಚಯವಾಗಿತ್ತು ಎರಡು ಕಂಪನಿಗಳ ವಿವಿಧ ಷೇರು ಹಾಗೂ ಐಪಿಒ ಗಳನ್ನ ಹರಿಪಾಲ್ ಸಿಂಗ್ ರಿಗೆ ನೀಡಿದ್ದರು
ಇದಕ್ಕೆ ಪ್ರತಿಯಾಗಿ 2023 ಡಿಸೆಂಬರ್ 26 ರಿಂದ ಫೆಬ್ರವರಿ 08 2024 ರವರೆಗೆ 6 ಕೋಟಿ 1 ಲಕ್ಷಕ್ಕೂ ಅಧಿಕ ಹಣ ನೀಡಿದ್ದ ಹರಿಪಾಲ್ ಸಿಂಗ್ ವಿವಿಧ ಬ್ಯಾಂಕ್ ಅಕೌಂಟ್ ಗಳ ಮೂಲಕ ಹಣ ವರ್ಗಾವಣೆ ಮಾಡಿದ್ರು ಹೂಡಿಕೆ ಮಾಡಿದ್ದ 6 ಕೋಟಿ ಹಿಂದೆಗೆದುಕೊಳ್ಳುವ ವೇಳೆ ಹಣ ನೀಡದೇ ವಿಳಂಬ ಮಾಡಿ ಅನೇಕ ಕಾರಣ ನೀಡಿದ್ದ ಕಂಪನಿಗಳು
ಫೆಬ್ರವರಿ 23 ರಂದು ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಚಾಲನೆ: ಪೂರ್ಣ ವೇಳಾಪಟ್ಟಿ ಹೀಗಿದೆ
ಕೇರಳದ ಉದ್ಯಮಿಯೊಬ್ಬರಿಗೆ ಇದೇ ರೀತಿ ವಂಚಿಸಿರೋದು ಹರಿಪಾಲ್ ಸಿಂಗ್ ರಿಗೆ ಗೊತ್ತಾಗಿತ್ತು ಕಡೆಗೆ ಇದೊಂದು ವಂಚನೆ ಜಾಲ ಎಂಬುದು ಗೊತ್ತಾಗಿ ಸೈಬರ್ ಕ್ರೈಂ ಠಾಣೆಗೆ ದೂರು