ಬೆಂಗಳೂರು:- ಸಧ್ಯ ಇದೀಗ ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಲ್ಲಿ ಹಾಗೂ ಗಾಸಿಪ್ ನಲ್ಲಿರುವ ವಿಚಾರ ಅಂದ್ರೆ ಅದು BPL ಕಾರ್ಡ್ ರದ್ದು ವಿಚಾರ. ಇದು ಅಕ್ಷರಸಹ ಫಲಾನುಭವಿಗಳ ನಿದ್ದೆಗೆಡಿಸಿದೆ.
ರಸ್ತೆ ಅಗಲೀಕರಣ ನೆಪದಲ್ಲಿ 70ಕ್ಕೂ ಹೆಚ್ಚು ಮನೆಗಳ ನೆಲಸಮ: ಬೀದಿಗೆ ಬಂದ ಕುಟುಂಬ!
ಎಸ್, ಗೃಹಲಕ್ಷ್ಮೀ ಬೆನ್ನಲ್ಲೇ ಸರ್ಕಾರ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ರೇಷನ್ ಕಾರ್ಡ್ಗೆ ಸದ್ದಿಲ್ಲದೇ ಆಪರೇಷನ್ಗೆ ಇಳಿದಿದೆ. ರಾಜ್ಯಾದ್ಯಂತ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲು ಮುಂದಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಎಸ್ಟಿ ಬಳಸುತ್ತಿದ್ದ 16 ಸಾವಿರ ಫಲಾನುಭವಿಗಳಿಗೆ ಯೋಜನೆಯಿಂದ ಹೊರಗುಳಿಸಲಾಗಿತ್ತು. ಇದೀಗ ಅದೇ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.
ರಾಜ್ಯಾದ್ಯಂತ ಒಟ್ಟು 10 ಸಾವಿರ ಕಾರ್ಡ್ಗಳನ್ನ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಕೆಲವು ಕಾರ್ಡ್ಗಳನ್ನ ಬದಲಾವಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ, ಸರ್ಕಾರಿ ನೌಕರ ಹೀಗೆ ಹಲವು ಮಾನದಂಡ ಇಟ್ಟು ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 9,441 ಕಾರ್ಡ್ APL ಕಾರ್ಡ್ ಆಗಿ ಚೇಂಜ್ ಆಗಿದೆ. ಇನ್ನೂ, ಕೋಲಾರದಲ್ಲಿ 6,500, ಉಡುಪಿ ಜಿಲ್ಲೆಯಲ್ಲಿ 6,422 ಕಾರ್ಡ್, ಬಾಗಲಕೋಟೆಯಲ್ಲಿ 6,299 ಬಿಪಿಎಲ್ ಕಾರ್ಡ್ಗಳು ಎಪಿಎಲ್ ಕಾರ್ಡ್ ಆಗಿ ಬದಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 5,973 ಕಾರ್ಡ್, ವಿಜಯಪುರ ಜಿಲ್ಲೆಯಲ್ಲಿ 4,359, ಮೈಸೂರು 4,221, ಹಾಸನ 3,925, ಮಂಡ್ಯ ಭಾಗದ 2,824, ಶಿವಮೊಗ್ಗ 2,346 BPL ಕಾರ್ಡ್ಗಳು APL ಆಗಿ ಬದಲಾವಣೆಯಾಗಿವೆ
ಬಿಪಿಎಲ್ ರದ್ದಾದರೆ ಆಯುಷ್ಮಾನ್, ವಿದ್ಯಾರ್ಥಿ ವೇತನ, ಸಿಎಂ ಪರಿಹಾರ ನಿಧಿ ಸಿಗೋದಿಲ್ಲ. ನರೇಗಾ ಯೋಜನೆ ಸೇರಿದಂತೆ ವೈಯಕ್ತಿಕ ಕಾಮಗಾರಿಯನ್ನ ಕೈಗೊಳ್ಳಲು ಆಗುವುದಿಲ್ಲ. ಇತ್ತ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಸರ್ಕಾರ ಬಿಎಪಿಎಲ್ ಕಾರ್ಡ್ ರದ್ದು ಮಾಡುತ್ತಿರುವುದಕ್ಕೆ ವಾಗ್ದಾಳಿ ನಡೆಸಿದ್ದಾರೆ. ಆದ್ರೆ, ಈ ಕುರಿತಂತೆ ಮಾತಾಡಿದ್ದ ಮುನಿಯಪ್ಪ, ಯಾವುದೇ ಕಾರ್ಡ್ ರದ್ದಾಗಿಲ್ಲ ಎಂದಿದ್ರು.