ಬೆಂಗಳೂರಿನಲ್ಲಿ ಸರಿಯಾಗಿ ಫುಟ್ ಪಾತ್ ನಲ್ಲಿ ನಡೆಯೋದೇ ಕಷ್ಟ. ಅತ್ತೊಂದ್ರಲ್ಲಿ ಫುಟ್ಪಾತ್ಗಳ ಮೇಲೆ ಯಮರೂಪಿ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಕಂಬಗಳು ಜನರ ಪಾಲಿಗೆ ಕಂಟಕ ತಂದಿವೆ.ಇವುಗಳ ಬಳಿ ಸ್ವಲ್ಪ ಯಾಮಾರಿದ್ರೂ ಯಮನ ಪಾದ ಸೇರೋದು ಗ್ಯಾರಂಟಿ..
ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ಕೂಡ ಸೇಫಲ್ಲ ಅನ್ನೋದು ಆಗಾಗ ನಡೆಯೋ ದುರ್ಘಟನೆಗಳೇ ಸಾಕ್ಷಿ.. ಪಾದಚಾರಿ ಮಾರ್ಗದಲ್ಲಿರೋ ಟ್ರಾನ್ಸ್ ಫಾರ್ಮರ್ ಗಳು ಹಾಗೂ ವಿದ್ಯುತ್ ಕಂಬಗಳಿಂದ ಹೊರಚಾಚಿರುವ ವೈರ್ಗಳು ಜನರ ಜೀವ ನುಂಗಲು ಕಾದು ಕುಳಿತಿವೆ. ಕಳೆದ ಎರಡು ಮೂರು ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ 100 ಕ್ಕೂ ಹೆಚ್ಚು ಮಂದಿ ವಿದ್ಯುತ್ ಅವಘಡಗಳಿಂದ ಜೀವ ಕಳೆದುಕೊಂಡಿದ್ದಾರೆ.ಜನರ ಓಡಾಟಕ್ಕೆ ತೊಂದರೆಯಾಗಿರುವ ಟ್ರಾನ್ಸ್ ಫಾರ್ಮರ್ಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಅವುಗಳ ವಿನ್ಯಾಸ ಬದಲಾಯಿಸಿ ಸ್ಥಳಾಂತರಿಸುವ ಕೆಲಸವನ್ನು ಮಾಡಬೇಕು .ಅಂದರೆ ಈ ಬಗ್ಗೆ ಬೆಸ್ಕಾಂ ನಿರ್ಲಕ್ಷ್ಯ ವಹಿಸಿರೋ ಜನರ ಕೆಂಗಣ್ಣಿಗೆ ಕಾರಣವಾಗಿದೆ.
ಅತೃಪ್ತರ ಮನವೊಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಕಸರತ್ತು: ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ!
ಮೂರು ಕಂಬಗಳ ಬದಲಾಗಿ ಹೊಸ ವಿನ್ಯಾಸದಲ್ಲಿ ಒಂದೇ ಕಂಬದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗುತ್ತಿದೆ. ನೆಲಮಟ್ಟದಲ್ಲಿದ್ದ ಹಾಕಲಾಗುತ್ತಿದ್ದ ಟ್ರಾನ್ಸ್ ಫಾರ್ಮರ್ಗಳನ್ನು 21 ಮೀಟರ್ ಎತ್ತರದ ಸಿಂಗಲ್ ಪೋಲ್ನಲ್ಲಿ ಎತ್ತರದಲ್ಲಿ ಅಳವಡಿಸಬೇಕು . ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋ ಕಾರಣ ಜನರಿಗೆ ಕಂಟಕವಾಗಿದೆ. ಇವುಗಳಿಗೆ ಹಾಕಲಾದ ವೈರ್ ಮತ್ತು ಕಂಬಿಗಳುಫುಟ್ ಪಾತ್ನಲ್ಲಿ ನಡೆದುಕೊಂಡು ಹೋಗುವವರಿಗೆ ಯಮಸ್ವರೂಪಿಯಾಗಿವೆ. ಮೂರೂವರೆ ಲಕ್ಷ ರೂಪಾಯಿ ಕರ್ಚು ಮಾಡಿ ಹಾಕಲಾಗುತ್ತಿರುವ ಟ್ರಾನ್ಸ್ ಫಾರ್ಮರ್ ಗಳು ಜನರಿಗೆ ಸಮಸ್ಯೆ ತಂದಿವೆ.
ಹೌದು ನಗರದಲ್ಲಿ ಬೆಸ್ಕಾಂಗೆ ಸೇರಿದ 49 ಸಾವಿರ ಟ್ರಾನ್ಸ್ ಫಾರ್ಮರ್ ಗಳು ರಸ್ತೆ ಬದಿ, ಫುಟ್ ಪಾತ್ ಮೇಲೆ ಹಾಕಲಾಗಿದೆ. ಆದ್ರೆ ಆ ಪೈಕಿ 5 ಸಾವಿರಕ್ಕು ಹೆಚ್ಚು ಟ್ರಾನ್ಸ್ ಫಾರ್ಮರ್ ಗಳು ಪಾದಚಾರಿಗಳ ಓಡಾಟಕ್ಕೆ ಅಡಚಣೆ ಮಾಡೋದಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿದೆ. ಸದ್ಯ ಹೊಸ ವಿನ್ಯಾಸದ ಬದಲಾಯಿಸಿ ನೆಲಮಟ್ಟದಿಂದ ಎತ್ತರಿಸಿದ ಮಾರ್ಗಕ್ಕೆ ಹಾಕುವ ಪ್ರಯತ್ನ ಆಗ್ತಿಲ್ಲ. ಕಳೆದ ಕೆಲ ದಿನಗಳ ಹಿಂದೆ ವಿದ್ಯುತ್ ವೈರ್ ಸ್ವರ್ಶಿಸಿ ತಾಯಿ ಮಗಳು ಸಾವುನ್ನಪಿದ್ರು ಅಧಿಕಾರಿಗಳು ಎಚ್ಚೆತ್ತುಕೊಳ್ತಿಲ್ಲ. ಬೆಸ್ಕಾಂ ಅಧಿಕಾರಿಗಳ ನಿರ್ಧಾರಕ್ಕೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಜನರ ಜೀವ ಹಿಂಡಲು ವಿದ್ಯುತ್ ಕಂಬ ಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳು ಕಾದು ಕುಳಿತಿವೆ.ಹೀಗಾಗಿ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ವಿದ್ಯುತ್ ತಂತಿಗಳು ಕಡೆಯಿಂದ ದೂರ ಇರೋದೇ ಒಳ್ಳೇದು.ಇಲ್ಲದ್ರೆ ಸೇಫ್ ಅಂತ ಅದರ ಬಳಿ ಹೋದ್ರೆ ಜೀವ ಹೋಗೋದು ಅಂತೂ ಸತ್ಯ.
ಕೃಷ್ಣಮೂರ್ತಿ ಪ್ರಜಾ ಟಿವಿ ಬೆಂಗಳೂರು