ಬೆಂಗಳೂರು:- ಬೆಂಗಳೂರಿನಲ್ಲಿ ಚಳಿ ವ್ಯಾಪಕವಾಗಿ ಹೆಚ್ಚಾಗಿದ್ದು, ಹಲವೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.
ಸಿಲಿಕಾನ್ ಸಿಟಿ ಜನರು ಚುಮುಚುಮು ಚಳಿಗೆ ಮನೆಯಿಂದ ಆಚೆ ಬರೋದಕ್ಕೂ ಹಿಂದೇಟು ಹಾಕುವಂತಾಗಿದೆ ಬೆರಳೆಣಿಕೆ ಜನರಷ್ಟೇ ಆಫೀಸ್ಗೆ ತೆರಳುವವರು ರಸ್ತೆಯಲ್ಲಿ ಓಡಾಡುವುದನ್ನು ಕಾಣಬಹುದಾಗಿದೆ.
ಚಳಿ ಕಾರಣದಿಂದಾಗಿ ಬಿಸಿಲು ಬಿದ್ದ ಮೇಲೆಯೇ ಸಿಟಿಯಲ್ಲಿ ಜನರು ಓಡಾಡೋದಕ್ಕೆ ಮುಂದಾಗುವಂತಾಗಿದೆ ಈ ವೇಳೆ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆಯು ಇದೆ.
ಚಳಿ ಕಾರಣದಿಂದಾಗಿ ಬಿಸಿಲು ಬಿದ್ದ ಮೇಲೆಯೇ ಸಿಟಿಯಲ್ಲಿ ಜನರು ಓಡಾಡೋದಕ್ಕೆ ಮುಂದಾಗುವಂತಾಗಿದೆ ಈ ವೇಳೆ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆಯು ಇದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿ ಅನುಭವ ಕಾಡುತ್ತಿದ್ದು, ಅದರಲ್ಲೂ ಮಡಿಕೇರಿ, ಸುಳ್ಯ, ,ಮೂಡಿಗೇರೆ, ಚಿಕ್ಕಮಗಳೂರು,ಬೆಂಗಳೂರು ಗ್ರಾಮಾಂತರ ಭಾಗಗಳು ಸೇರಿದಂತೆ ಚಳಿ ಚಳಿ ಎನ್ನುವಂತಾಗಿದೆ. ಥರಗುಟ್ಟುವ ಚಳಿಗೆ ಐಟಿಸಿಟಿ ಜನರು ಮರಗಟ್ಟಿ ಹೋದಂತೆ ಭಾಸವಾಗುತ್ತಿದೆ.