ಬೆಂಗಳೂರು:- ವ್ಹೀಲಿಂಗ್ ಮಾಡಿದ ಪ್ರಕರಣಕ್ಕೆ ಸಂಧಿಸಿದಂತೆ ಮಹಿಳೆಯೊಬ್ಬರು ಭಾರೀ ಮೊತ್ತದ ದಂಡವನ್ನು ತೆತ್ತಿದ್ದಾರೆ.
ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ವಾಹನ ವ್ಹೀಲಿಂಗ್ ಮಾಡಲು ಬಳಕೆ ಆಗಿತ್ತು. ಈ ಸಂಬಂಧ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದ ಪೊಲೀಸರು ಆತನಿಂದಲೂ ದಂಡ ವಸೂಲಿ ಮಾಡಿದ್ದರು. ವಾಹನ ಮಾಲೀಕರಾದ ಮಹಿಳೆಗೆ ಬರೊಬ್ಬರಿ 25,200 ರೂಪಾಯಿ ದಂಡ ಕಟ್ಟಿದ್ದಾರೆ.

ಇದೇ ವರ್ಷ ಜನವರಿಯಲ್ಲಿ ನಗರದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ತಮ್ಮ ಮಿತಿಯಲ್ಲಿ ವ್ಹೀಲಿಂಗ್ ಮಾಡಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಅಪ್ರಾಪ್ತ ಸವಾರರನ್ನು ಬಂಧಿಸಿದ್ದರು. ಹುಡುಗ ತನ್ನ ನೆರೆಹೊರೆಯವರ ಹೆಸರಿನಲ್ಲಿ ನೋಂದಾಯಿಸಿದ ಸ್ಕೂಟರ್ ವ್ಹೀಲಿಂಗ್‌ಗೆ ಬಳಸಿದ್ದಾನೆ ಎಂಬುದು ತಿಳಿದು ಬಂದಿತ್ತು.
ಈ ಅಪ್ರಾಪ್ತ ವಯಸ್ಕನು ಸಿಕ್ಕಿಬಿದ್ದ ತಕ್ಷಣ ಮಾಡಿದ ತಪ್ಪಿಗೆ ಜೆಜೆ ಮಂಡಳಿಯ ಅಡಿಯಲ್ಲಿ ರೂ 1,500 ದಂಡವನ್ನು ಪಾವತಿಸಿದ. ಅಪ್ರಾಪ್ತರು ವಾಹನ ಸವಾರಿ ಮಾಡಿದರೆ ಮಾಲೀಕರನ್ನು ಜವಾಬ್ದಾರಿ ಮಾಡುವ ನಿಯಮ ಇದೆ. ಅದರ ಅಡಿ ವಾಹನದ ಮಾಲೀಕರಾದ ಮಂಜುಳಾ ಎಂ ಅವರಿಗೆ ದಂಡ ವಿಧಿಸಲಾಗಿತ್ತು.
ಆದರೆ ಅವರು ಈವರೆಗೂ ಪಾವತಿಸಿರಲಿಲ್ಲ. ಹೀಗಾಗಿ ಅವರ ವಿರುದ್ಧ ಪ್ರಕರಣ ನ್ಯಾಯಾಲದ ಮೆಟ್ಟಿಲೇರಿತ್ತು. ಅಲ್ಲಿ ಅಂತಿಮವಾಗಿ ಅವರ ತಪ್ಪು ಸಾಬೀತಾಗಿ ಅವರಿಗೆ 25,200 ರೂಪಾಯಿ ದಂಡ ಪಾವತಿಗೆ ಸೂಚಿಸಲಾಯಿತು. ಅವರು ಗುರುವಾರ ಹಣ ಪಾವತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

