ಬೆಂಗಳೂರು: ನಗರದ ವಿದ್ಯಾರಣ್ಯಪುರ ತಿಂಡ್ಲು ದುರ್ಗಾದೇವಿ ಬಡಾವಣೆಯಲ್ಲಿರುವ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ ಡಿಸೆಂಬರ್ 6 ರಿಂದ 17ರವರೆಗೆ 11 ದಿನಗಳ ಕಾಲ ಶ್ರೀ ವಿಶ್ವ ಮಹಾಕಾಳೀ ಯಾಗ ನಡೆಯಲಿದೆ.
ವಿದ್ಯಾಭಿವೃದ್ಧಿ ವಶೀಕರಣ, ಸರ್ವ ವಶೀಕರಣ, ಸರ್ವ ಶತೃನಾಶ, ಸರ್ವರೋಗ ನಿವಾರಣ, ಸರ್ವ ಕಾರ್ಯವಿಜಯ, ಕುಲದೋಷ ನಿವಾರಣ, ಗ್ರಹದೋಷ ನಿವಾರಣ, ಸರ್ವ ಬಾಧೆಗಳ ನಿವಾರಣ, ಸರ್ಪದೋಷ ನಿವೃತ್ತಿ, ಸೌಭಾಗ್ಯದೋಷ ನಿವಾರಣ, ಪಿತೃ ದೋಷ ನಿವಾರಣ, ಸಂತಾನ ಪ್ರಾಪ್ತಿ, ಸ್ವಯಂವರ ಶಾಂತಿ, ಪಂಚಭೂತ ಶಾಂತಿ ಹಾಗೂ ಲೋಕಶಾಂತಿಗಾಗಿ ಈ ವಿಶ್ವ ಮಹಾಕಾಳಿ ಯಾಗವನ್ನು ಏರ್ಪಡಿಸಲಾಗಿದೆ.
ಬದ್ರಿನಾಥ ಆಶ್ರಮದ ಕೇರಳ ತಾಂತ್ರಿಕ ಪ್ರಮುಖರು, ಯಾಗ ಗುರು ಶಾಂತಿದಾಸನ್ ಸ್ವಾಮೀಜಿ ಅವರು ವಿಶೇಷವಾಗಿ ಕಾಳಿ ಯಾಗ, ನವಕಾಳಿ ಹೋಮ, ಮಹಾ ಚಂಡಿಕಾ ಹೋಮ, ಮಹಾಲಕ್ಷ್ಮಿ ಹೋಮ, ಮಹಾ ಸರಸ್ವತಿ ಹೋಮ, ಮಹಾ ಸುದರ್ಶನ ಹೋಮ, ಮಹಾ ಗಾಯತ್ರಿ ಹೋಮ, ಮಹಾ ಅಗ್ನಿ ಹೋತ್ರ, ಅಘೋರ ಹೋಮ, ವೀರಭದ್ರ ಹೋಮ, ಮಹಾಗಣಪತಿ ಹೋಮ, ಮಹಾದುರ್ಗಾ ಹೋಮ, ನವಗ್ರಹ ಹೋಮ, ಸರ್ಪಬಲಿ, ಮಹಾ ಪ್ರತ್ಯಂಗಿರಾ ಹೋಮ, ಮತ್ತು ಮಹಾ ವಾರ್ತಾಳಿ ಹೋಮ ನೆರವೇರಿಸಲಿದ್ದಾರೆ.
ಸಾವಿರಾರು ದೇವಾಲಯಗಳಿಗೆ ಭೇಟಿ ನೀಡುವುದಕ್ಕಿಂತ ಒಂದು ಯಾಗಶಾಲೆಗೆ ಭೇಟಿ ನೀಡುವುದು ಉತ್ತಮ ಎನ್ನುವುದು ಉಪನಿಷತ್ತಿನ ಸಿದ್ಧಾಂತವಾಗಿದೆ. ನಾಡಿನ ಏಳ್ಗೆಗಾಗಿ ಈ ಯಾಗ ನಡೆಸುತ್ತಿದ್ದು, ಅಮ್ಮನ ಕೃಪೆಗೆ ಪಾತ್ರರಾಗಲು ಇಚ್ಛಿಸುವವರು ಈ ಯಾಗಕ್ಕೆ ಭೇಟಿ ನೀಡಬಹುದು. ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಆರ್.ವಸಂತ್ ಕುಮಾರ್ ಶಾಸ್ತ್ರಿ, ಸಹಭಾಗಿತ್ವದಲ್ಲಿ ನಡೆಯಲಿರುವ ಯಾಗವು ವಿಶೇಷವಾಗಿದ್ದು, ಮನುಕುಲಕ್ಕೆ ಒಳಿತಾಗಲಿದೆ. ಆಸಕ್ತರು ಯಾಗದಲ್ಲಿ ಪಾಲ್ಗೊಂಡು ತಮ್ಮ ಕಷ್ಟ, ಸಂಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದೆಂದು ಎಸ್.ಎನ್.ಧರ್ಮ ಪ್ರಜಾರಣ ಯೋಗಂ ಕೌನ್ಸಿಲ್ ನ ಅಧ್ಯಕ್ಷ ಆರ್.ಅರುಣ್ ಮತ್ತು ಬಿಐವಿವಿಪಿಎ ಮಾಜಿ ಅಧ್ಯಕ್ಷ ಎ.ರವಿ ಅವರು ತಿಳಿಸಿದ್ದಾರೆ.