ಬೆಂಗಳೂರು: ಡ್ರಗ್ಸ್ ಓವರ್ ಡೋಸ್ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಯಾರಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪವರ್ ಶೇರಿಂಗ್ ವಿಚಾರ: ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ – CM ಸಿದ್ದರಾಮಯ್ಯ!
ಯಾರಂಡಹಳ್ಳಿ ಗ್ರಾಮದಲ್ಲಿ ವಾಸವಿದ್ದ ಅಸ್ಸಾಂ ಮೂಲದ 37 ವರ್ಷದ ದಿನಾವ್ ಅಫ್ರೀದಿ ಆಲಿ, 24 ವರ್ಷದ ಅಶ್ರಪ್ ಆಲಿ ಮೃತರು. ಇನ್ನು ಇವರು ಸ್ನೇಹಿತರ ಜತೆಗೆ ಸೇರಿಕೊಂಡು ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ಮಧ್ಯ ಸೇವನೆ ಮಾಡಿದ್ದು, ಅನಂತರ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮೃತದೇಹಗಳು ಬಿದ್ದಿದ್ದ ಜಾಗದಲ್ಲಿ ಎಣ್ಣೆ ಬಾಟಲಿಗಳ ಜತೆಗೆ ಮಾಧಕ ವಸ್ತುಗಳ ಇಂಜೆಕ್ಷನ್ಗಳನ್ನು ಪತ್ತೆಯಾಗಿವೆ. ಸ್ಥಳಕ್ಕೆ ಎಸ್ಪಿ ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಜತೆಯಲ್ಲಿ ಪಾರ್ಟಿ ಮಾಡಿದ್ದ ಇತರ ವ್ಯಕ್ತಿಗಳಿಗಾಗಿ ಶೋಧ ನಡೆಸಿದ್ದಾರೆ ಮೃತ ವ್ಯಕ್ತಿಗಳಿಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಮಾದಕ ವಸ್ತು ಇಂಜೆಕ್ಟ್ ಆದ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ನಿ ಮನೆಗೆ ಬಂದು ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..