ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂವರ ಭೀಕರ ಕೊಲೆಯಾಗಿದೆ.. ಪತಿಯೇ, ಪತ್ನಿ, ಮಗಳು, ದೊಡ್ಡಮ್ಮನ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.. ಆ ಟ್ರಿಪಲ್ ಮರ್ಡರ್ ನ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ..
ಅಪ್ರಾಪ್ತ ವಿದ್ಯಾರ್ಥಿನಿ ಜತೆ ಎಸ್ಕೇಪ್ ಆಗಿದ್ದ ಟ್ಯೂಷನ್ ಶಿಕ್ಷಕ ಅರೆಸ್ಟ್!
ಇದು ನಿಜಕ್ಕೂ ಭೀಕರ.. ಸಿನಿಮಾಗಳಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಕೊಲೆ ಮಾಡುವ ರೀತಿ ನಡೆದಿರುವ ಕೊಲೆ.. ಹೌದು, ಬೆಂಗಳೂರಿನ ಪೀಣ್ಯ ಬಳಿಯ ಜಾಲಹಳ್ಳಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.. ಹೆಬ್ಬಗೊಡಿಯಲ್ಲಿ ಹೊಮ್ ಗಾರ್ಡ್ ಆಗಿ ಕೆಲಸ ಮಾಡುವ 42 ,ವರ್ಷದ ಗಂಗರಾಜು, 38 ವರ್ಷದ ಪತ್ನಿ ಭಾಗ್ಯ, 19 ವರ್ಷದ ಮಗಳು ನವ್ಯ, 23 ವರ್ಷದ ಹೇಮಾಲತಾ ಅನ್ನೋರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಸಂಜೆ ಸುಮಾರು ಐದು ಗಂಟೆ ವೇಳೆ ಈ ಘಟನೆ ನಡೆದಿದೆ.. ಇಂದು ಏಕಾಏಕಿ ಮನೆಗೆ ಬಂದ ಹೋಮ್ ಗಾರ್ಡ್ ಗಂಗರಾಜು, ಮನೆಯಲ್ಲಿದ್ದ ಮಗಳು, ನವ್ಯ, ದೊಡ್ದಮ್ಮನ ಮಗಳು ಹೇಮಲತಾ ಮೇಲೆ ಜಗಳ ತೆಗೆದಿದ್ದ.. ಜಗಳ ತಾರಕ್ಕೇರಿದಂತೆ ಏಕಾಏಕಿ ಮನೆಯಲ್ಲಿದ್ದ ಮಚ್ಚು ತಗೊಂಡು ಪಾಪಿ ತಂದೆ ಗಂಗಾರಾಜು, ಮೊದಲು 19 ವರ್ಷದ ಮಗಳು ನವ್ಯ ಗಳ ತಲೆಗೆ ಬಲವಾಗಿ ಹೊಡೆದಿದ್ದ.. ರಕ್ತ ಸೇರುತ್ತಿದ್ದಂತೆ ನವ್ಯ, ಮತ್ತು ಹೇಮಲತಾ ಮನೆಯಿಂದ ಹೊರಗಡೆ ಓಡೋಕೆ ಶುರುಮಾಡಿದ್ರು.. ಇಷ್ಟಕ್ಕೆ ಬಿಡದ ಆರೋಪಿ ಮನೆಯಲ್ಲಾ ಇಬ್ಬರನ್ನೂ ಅಟ್ಟಾಡಿಸಿದ್ದ.. ಕೊನೆ ಗೆ ನವ್ಯ, ಹೇಮಾಲತಾಳ ಮೇಲೆ ಭೀಕರವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದ.. ಯಾವ ಮಟ್ಟಕ್ಕೆ ಅಂದ್ರೆ ಇಬ್ಬರ ತಲೆಗಳು ದೇಹದಿಂದ ಬೇರ್ಪಡುವಷ್ಟು.. ಇದೇ ವೇಳೆ ಗಲಾಟೆ ಶಬ್ದ ಕೇಳಿದ ಗಂಗರಾಜು ಪತ್ನಿ ಭಾಗ್ಯ ಮನೆಗೆ ಬಂದಿದ್ದಾಳೆ.. ಮೊದಲೇ ಮಚ್ಚು ಹಿಡಿದಿದ್ದ ಪಾಪಿ ಗಂಗರಾಜು ಪತ್ನಿಯ ಮೇಲೂ ಮಚ್ಚು ಬೀಸಿದ್ದ.. ಪರಿಣಾಮ ಕ್ಷಣಮಾತ್ರದಲ್ಲಿ ಕೊಲೆಯಾಗಿ ಹೋಗಿದ್ರು.. ನಂತರ ಅದೇ ಮಚ್ಚು ಕೈಯಲ್ಲಿ ಹಿಡಿದ ಆರೋಪಿ ಗಂಗರಾಜು, ನೇರವಾಗಿ ಪೀಣ್ಯ ಪೊಲೀಸರ ಮುಂದೆ ಶರಣಾಗಿದ್ದಾನೆ.
ಇನ್ನೂ ಇದೇ ವೇಳೆ ಮತ್ತೊಂದು ವಿಚಾರ ಗೊತ್ತಾಗಿದ್ದು, ಇಂದು ಕೊಲೆಯಾದ ಭಾಗ್ಯ ಓಂ ಶಕ್ತಿ ಗೆ ಮಾಲೆ ಹಾಕೋಕೆ ಸಿದ್ದತೆ ನಡೆಸಿದ್ರಂತೆ.. ಅದೇ ಕಾರಣಕ್ಕಾಗಿ ದೊಡ್ಡ ಮ್ಮನ ಮಗಳು ಹೇಮಲತಾ ಮನೆಗೆ ಬಂದಿದ್ದಾಳೆ..ಪೊಲೀಸರ ವಿಚಾರಣೆ ವೇಳೆ ಪತಿ ಗಂಗರಾಜು ಮತ್ತು ಪತ್ನಿ ಭಾಗ್ಯ ಗೂ ಹಾಗಾಗ ಜಗಳ ನಡೀತಿತ್ತಂತೆ.. ಇವತ್ತು ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ..