ಬೆಂಗಳೂರು:- ಬೆಂಗಳೂರಿನ ಮಸಾಜ್ ಪಾರ್ಲರ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು, 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ದಾಳಿ ನಡೆಸಿದ್ದು ಸುಮಾರು 4 ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಾಳಿ ವೇಳೆ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ದಾಳಿ ವೇಳೆ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಬಹುಮಹಡಿ ಕಟ್ಟಡದ 1 ಮತ್ತು 6ನೇ ಪ್ಲೋರ್ನಲ್ಲಿ ಅನಿಲ್ ಎಂಬಾತ ನಿರ್ವಾಣ ಸ್ಪಾ ನಡೆಸುತ್ತಿದ್ದ. ಸಿಸಿಬಿ ಮಹಿಳಾ ಸಂರಕ್ಷಣಾ ದಳ ನಿರ್ವಾಣ ಸ್ಪಾ ಮೇಲೆ ದಾಳಿ ಮಾಡಿ ದಂಧೆ ಬಯಲಿಗೆಳೆದಿದೆ. ಸ್ಪಾ ಹೆಸರಲ್ಲಿ ಕಾನೂನು ಬಾಹಿರವಾಗಿ ಬಾಡಿ ಟು ಬಾಡಿ ಮಸಾಜ್ ಸೇರಿದಂತೆ ವಿವಿಧ ಮಾದರಿಯ ಅನೈತಿಕ ಚಟುವಟಿಕೆ ನಡೆಯುತ್ತಿರೋದು ಪತ್ತೆಯಾಗಿದೆ. ಹೊರ ರಾಜ್ಯ ಮತ್ತು ಹೊರ ದೇಶದ ಯುವತಿಯರು ಮತ್ತು ಮಹಿಳೆಯರನ್ನ ಕರೆಸಿ ಈ ದಂಧೆ ನಡೆಸಲಾಗುತ್ತಿತ್ತು. ಒಟ್ಟು 34 ರೂಂಗಳನ್ನ ಒಳಗೊಂಡ ಬಹು ಅಂತಸ್ಥಿನ ಕಟ್ಟಡದಲ್ಲಿ ಸ್ಪಾ ನಡೆಯುತ್ತಿತ್ತು.
ಇನ್ನು ಸ್ಪಾ ನಡೆಸುತ್ತಿದ್ದ ಆರೋಪಿ ಅನಿಲ್ನನ್ನು ಬಂಧಿಸಲಾಗಿದ್ದು ಈತ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಸ್ಪಾ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಅಧಿಕಾರಿಗಳು ಅನೀಲ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.