ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಜನರನ್ನೂ ಬಿಟ್ಟೂಬಿಡದೆ ಕಾಡುತ್ತಿದೆ. ಬೆಂಗಳೂರಿಗರ ಅರ್ಧಜೀವನ ಟ್ರಾಫಿಕ್ನಲ್ಲೇ ಕಳೆದುಹೋಗುತ್ತಿದ್ದು, ಇತ್ತ ಬ್ರ್ಯಾಂಡ್ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಹೊಸ ಯೋಜನೆ ರೂಪಿಸಲು ಸಜ್ಜಾಗಿದ್ದಾರೆ. ಸಂಚಾರ ದಟ್ಟಣೆಗೆ ಕೃತಕ ಬುದ್ದಿಮತ್ತೆ AI ಆಧರಿತ ಸ್ವಯಂ ಚಾಲಿತ ಸಿಗ್ನಲ್ಗಳನ್ನು ಅಳವಡಿಸಿದ್ದಾರೆ. ಬೆಂಗಳೂರಿನ 125 ಜಂಕ್ಷನ್ಗಳಲ್ಲಿ ಈಗಾಗಲೇ ಎಐ ಆಧರಿತ ಸಿಗ್ನಲ್ ಅಳವಡಿಸಲಾಗಿದೆ.
Maha Shivratri 2025: ಮಹಾಶಿವರಾತ್ರಿ ಹಬ್ಬದ ಪೂಜಾ ಮುಹೂರ್ತ, ಇತಿಹಾಸ ಮತ್ತು ಮಹತ್ವ ತಿಳಿಯಿರಿ!
ಈ ಎಐ ಆಧಾರಿತ ಸಿಗ್ನಲ್ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತವೆ. ಅತಿ ಹೆಚ್ಚು ವಾಹನ ದಟ್ಟಣೆ ಇರುವ ಸಮಯ ನಿರ್ವಹಿಸುವ ತಂತ್ರಜ್ಞಾನ ಇದಾಗಿದೆ. 53 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಒಟ್ಟು 165 ಜಂಕ್ಷನ್ನಲ್ಲಿ ಎಐ ಆಧರಿತ ಕ್ಯಾಮೆರಾ ಅಳವಡಿಸಲು ಯೋಚಿಸಲಾಗಿದೆ. ಸದ್ಯ 125 ಜಂಕ್ಷನ್ಗಳಲ್ಲಿ ಎಐ ಸ್ವಯಂ ಚಾಲಿತ ಕ್ಯಾಮೆರಾ ಅಳವಡಿಸಲಾಗಿದೆ. ಸಿ-ಡಾಕ್ ಕಂಪನಿಯಿಂದ ಎಐ ಸ್ವಯಂ ಚಾಲಿತ ಸಿಗ್ನಲ್ ಅಳವಡಿಸಲಾಗಿದೆ.
ಎಐ ಸಿಗ್ನಲ್ನಲ್ಲಿ ಎಷ್ಟು ವಿಧ? ಕಾರ್ಯ ಹೇಗೆ?
ಎಐ ಸಿಗ್ನಲ್ನಲ್ಲಿ ಎರಡು ವಿಧಗಳಿವೆ. ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ (BATCAS) ಮತ್ತು ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ (VAC). ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಬೆಂಗಳೂರಿನ ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಗ್ರೀನ್ ಸಿಗ್ನಲ್ ಅನ್ನು ನೀಡುತ್ತದೆ. ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ ಹೆಚ್ಚು ವಾಹನ ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಕಾಲ ಗ್ರೀನ್ ಸಿಗ್ನಲ್ಯನ್ನೂ ಮತ್ತು ಕಡಿಮೆ ವಾಹನ ಇರುವಲ್ಲಿ ಕಡಿಮೆ ಸಮಯ ಗ್ರೀನ್ ಸಿಗ್ನಲ್ ನೀಡುತ್ತದೆ.
ಎಐ ಸಿಗ್ನಲ್ ಉಪಯೋಗ
ಎಐ ಸಿಗ್ನಲ್ಗಳು ಪ್ರಯಾಣದ ಸಮಯವನ್ನು ಶೇ 33 ರಷ್ಟು ಕಡಿಮೆ ಮಾಡಲಿದೆ. AI ಸಿಗ್ನಲ್ಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿವೆ. ವಿಶೇಷವಾಗಿ ಪೀಕ್ ಸಮಯದಲ್ಲಿ ಬಹಳಷ್ಟು ಅನುಕೂಲಕಾರಿಯಾಗಿದೆ. ಅಲ್ಲದೇ, ಅನಗತ್ಯ ಜಾಮ್ ತಪ್ಪಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ. ದಟ್ಟಣೆ ಇರುವ ಮಾರ್ಗಕ್ಕೆ ಹೆಚ್ಚು ಅವಕಾಶ ನೀಡುವ ಮೂಲಕ ಕಾಯುವ ಸಮಯ ತಗ್ಗಲಿದೆ.