ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು 7 ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಇದೀಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಮಧ್ಯೆ ಬೆಂಗಳೂರು ಪೊಲೀಸರು ದರ್ಶನ್ ಗೆ ಮತ್ತೊಂದು ಶಾಕ್ ನೀಡಿದ್ದಾರೆ. ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಪೊಲೀಸರು ಅಮಾನತ್ತುಗೊಳಿಸಿದ್ದಾರೆ.
ದರ್ಶನ್ ಅವರು ಗನ್ ಇಟ್ಟುಕೊಳ್ಳುಲು ಅನುಮತಿ ನೀಡಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ಸೆಲೆಬ್ರಿಟಿ ಎಂಬ ಕಾರಣಕ್ಕೆ ಅನುಮತಿ ನೀಡಬೇಕು ಎಂದು ಮನವಿಮಾಡಿದ್ದರು. ಆದರೆ ಕೇಸ್ ಮುಗಿಯುವವರೆಗೂ ಗನ್ ಲೆಸೆನ್ಸ್ ಬಳಸವುಂತಿಲ್ಲ ಎಂದು ಪೊಲೀಸರು ಸ್ಟ್ರಿಕ್ಟ್ ವಾರ್ನಿಂಗ್ ಮಾಡಿದ್ದಾರೆ.
ಇದರ ಜೊತೆಗೆ ದರ್ಶನ್ ಹೆಸರಿನಲ್ಲಿರುವ ಎರಡು ಗನ್ ಆರ್ ಆರ್ ನಗರ ಪೊಲೀಸರಿಗೆ ಹಸ್ತಾಂತರ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ದರ್ಶನ್ ರೇಣುಕಾಸ್ವಾಮಿ ಕೇಸ್ನಲ್ಲಿ ಆರೋಪಿಯಾಗಿದ್ದರಿಂದ ಗನ್ ಲೈಸೆನ್ಸ್ ಕ್ಯಾನ್ಸಲ್ ಗೆ ಪೊಲೀಸರು ಪತ್ರ ಬರೆದಿದ್ದರು. ಈ ಹಿಂದೆ ಪೊಲೀಸ್ ನೋಟಿಸ್ಗೆ ದರ್ಶನ್ ಉತ್ತರವನ್ನು ಕೂಡ ನೀಡಿದ್ದರು.
ನನಗೆ ಗನ್ ಬೇಕು. ನಾನೊಬ್ಬ ಸೆಲೆಬ್ರೆಟಿ, ನಾನು ಹೋದ ಕಡೆ ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆಗೆ ಗನ್ ಬೇಕು ಎಂದಿದ್ದರು. ಈ ಬಗ್ಗೆ ಪರಶೀಲನೆ ನಡೆಸಿದ ಪೊಲೀಸರು ಪ್ರಮುಖ ಕೇಸ್ನಲ್ಲಿ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗನ್ ಲೈಸೆನ್ಸ್ನ್ನು ತಾತ್ಕಾಲಿಕಾವಿ ಅಮಾನತ್ತಿನಲ್ಲಿಡಲು ನಿರ್ಧಾರ ಕೈಗೊಂಡಿದ್ದಾರೆ.