ಬೆಂಗಳೂರು: ಮಾನವೀಯತೆ ಮರೆತರಾ ಸಿಲಿಕಾನ್ ಸಿಟಿ ಪೋಲಿಸರು ಬೆಂಗಳೂರು ಪೋಲಿಸ್ ಕಮೀಷನರ್ ನೋಡಲೇ ಬೇಕಾದ ಸ್ಟೋರಿ ಇದು..
ಹೌದು ..ಅಪಘಾತ ವಾಗಿ ಬಿದ್ದಿದ್ದ ಗಾಯಾಳು ನೆರವಿಗೆ ಧಾವಿಸಿದ ಪೊಲೀಸರು ಕಿವಿಯಲ್ಲಿ ರಕ್ತಸ್ರಾವಾಗ್ತಿದ್ರು ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತ್ತಿದ್ದರು ಹಾಗೆ ಆಸ್ಪತ್ರೆಗೆ ಸೇರಿಸಲು ಮುಂದಾಗದೆ ಸುಮ್ಮನೆ ನೋಡಿಕೊಂಡು ಇದು ನಮ್ಮ ಕೆಲಸವಲ್ಲ ಇರೀ ಆಂಬ್ಯೂಲೆನ್ಸ್ ಬರಿ ಎಂದು ಹೇಳಿಕೊಂಡೇ ಕಾಲ ಕಳೆದರು.
ಈ ಘಟನೆ ನಡೆದಿದ್ದು ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ತಡರಾತ್ರಿ ಆಗಿದ್ದು. ಆಸ್ಪತ್ರೆಗೆ ಸೇರಿಸಲು ಕೇಳಿಕೊಂಡ್ರು ಅಂಬ್ಯುಲೆನ್ಸ್ ಬರಲಿ ಎಂದು ಹೇಳಿದ ಪೊಲೀಸರು ಕನಿಷ್ಠ ಮಾನವೀಯತೆ ಮರೆತರಾ , ಮನುಷತ್ವ ಅನ್ನೋದೆ ಇಲ್ವಾ ಇವರಿಗೆ ಎಂದೆನಿಸುತ್ತದೆ.
ಹೊಯ್ಸಳ ವಾಹನದಲ್ಲಿ ಗಾಯಾಳುನ್ನ ಆಸ್ಪತ್ರೆಗೆ ಸೇರಿಸಲು ಯುವಕನ ಮನವಿ ಎಷ್ಟೇ ಕೇಳಿಕೊಂಡ್ರು ಆಸ್ಪತ್ರೆಗೆ ಸೇರಿಸಲು ಮುಂದಗಾದ ಪೋಲಿಸರು ಸ್ಥಳದಲ್ಲಿ ಯೇ ಇದ್ದ ಟ್ರಾಫಿಕ್, ಲಾ ಅಂಡ್ ಆರ್ಡರ್ ಪೋಲಿಸರು ಹೋಯ್ಸಳ ವಾಹನದಲ್ಲಿ ಕರೆದುಕೊಂಡು ಹೋಗಲು ಕೇಳಿದ್ರು ಇದು ನನ್ನ ವಾಹನವಲ್ಲ ಎಂದು ತಳ್ಳಿ ಹಾಕಿದ ಪೊಲೀಸ್ ಸಿಬ್ಬಂದಿ..
ಕೊನೆಗೆ ತನ್ನದೇ ಕಾರಿನಲ್ಲಿಯೇ ಕರೆದುಕೊಂಡು ಹೋದ ಯುವಕ ಆಸ್ಪತ್ರೆಗೆ ಸೇರಿಸಿದ . ನೈಟ್ ಶಿಫ್ಟ್ ನಲ್ಲಿರುವ ಪೊಲೀಸರು ಏನು ಮಾಡ್ತಾರೆ ಮತ್ತೆ ಈ ರೀತಿ ಮಾಡೋದಾದ್ರೆ ಪೊಲೀಸರ ಜನರ ರಕ್ಷಕರು ಅಂಥ ಹೇಗಾಗುತ್ತಾರೆ ಇದಕ್ಕೆಲ್ಲಾ ಪೊಲೀಸ್ ಕಮೀಷನರ್ ಅವರೇ ಉತ್ತರಿಸಬೇಕು!