ಆನೇಕಲ್:- ಬೆಂಗಳೂರಿನ ಜನರಿಗೆ ಮತ್ತೆ ಚಿರತೆ ಓಡಾಟ ಕಂಡು ಬಂದಿದೆ. ಜಿಗಣಿಯ ಪ್ರತಿಷ್ಠಿತ ಬಡಾವಣೆಯಲ್ಲಿ ಚಿರತೆ ವಾಕಿಂಗ್ ಮಾಡುತ್ತಿದ್ದು, ವಾಯು ವಿಹಾರಿಗಳು ಶಾಕ್ ಆಗಿದ್ದಾರೆ.
ಕೆ.ಆರ್.ಪುರ: ಐಟಿಐ ಗೇಟ್ ಓಪನ್, ಸಿಹಿ ವಿತರಿಸಿ ಸಂಭ್ರಮಿಸಿದ ಬೈರತಿ ಬಸವರಾಜ್!
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಚಿರತೆ ಓಡಾಟ ದೃಶ್ಯ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದ ಜಿಗಣಿಯ ನಿಸರ್ಗ ಲೇಔಟ್ ನಲ್ಲಿ ಚಿರತೆ ಓಡಾಟ ಕಂಡು ಬಂದಿದ್ದು, ಚಿರತೆಯ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಿರತೆ ಕಂಡು ಬಡಾವಣೆ ವಾಸಿಗಳಲ್ಲಿ ಢವಢವ ಶುರುವಾಗಿದೆ.
ಚಿರತೆ ವಾಕಿಂಗ್ನಿಂದ ಜನರ ವಾಕಿಂಗ್ ಬಂದ್ ಮಾಡಲಾಗಿದೆ. ದಿನ ಬೆಳಗಾದರೆ ಮಕ್ಕಳು ಮಹಿಳೆಯರು ವಾಕಿಂಗ್ ಮಾಡಲಾಗುತ್ತದೆ.. ಸಮೀಪದಲ್ಲಿಯೇ ಬನ್ನೇರುಘಟ್ಟ ಅರಣ್ಯ ಇದೆ. ಆದ್ರು ಇದೇ ಮೊದಲ ಬಾರಿಗೆ ಚಿರತೆ ಕಂಡಿದೆ. ಅರಣ್ಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕು. ಬೋನ್ ಇಟ್ಟು ಚಿರತೆ ಸೆರೆಗೆ ಪ್ರಯತ್ನ ಮಾಡಬೇಕು.
ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.