ಬೆಂಗಳೂರು :– ಲೋಕಸಭೆ ಚುನಾವಣೆಗೆ ಅಂತಿಮ ಹಂತದ ಸಿದ್ಧತೆಗೆ ಬಿಬಿಎಂಪಿ ಮುಂದಾಗಿದೆ. ಆ ಮೂಲಕ ನಗರದ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲು ಚುನಾವಣಾ ವಿಭಾಗ ಮುಂದಾಗಿದೆ. 2024ರ ಲೋಕಸಭೆ ಚುನಾವಣೆಗೆ ನಗರದಲ್ಲಿ 450 ಮತಗಟ್ಟೆಗಳ ಹೆಚ್ಚಳ ಮಾಡಲಾಗುತ್ತಿದೆ. 2019ರ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣ ಆಧರಿಸಿ ಕಡಿಮೆ ಮತದಾನವಾಗಿರುವ ವಾರ್ಡ್ಗಳಲ್ಲಿ ಮತಗಟ್ಟೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ.
ಮತಗಟ್ಟೆಗಳು
ಬೆಂಗಳೂರು ಕೇಂದ್ರ: 44,000,
ಬೆಂಗಳೂರು ದಕ್ಷಿಣ: 42,350
ಬೆಂಗಳೂರು ಉತ್ತರ: 52,000
ಬೆಂಗಳೂರು ಗ್ರಾಮಾಂತರ ಜಿಲ್ಲೆ: 97,000
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬರೋಬ್ಬರಿ 198 ವಾರ್ಡ್ಗಳು ಇವೆ. ಆದರೆ ಕಳೆದ ಬಿಜೆಪಿ ಸರ್ಕಾರ ಇದನ್ನ 243 ವಾರ್ಡ್ಗೆ ಹೆಚ್ಚಿಸಿತ್ತು. ಕೋರ್ಟ್ನಲ್ಲಿ ತಕರಾರು ಅದು ಇದು ಅಂತಾ ಚುನಾವಣೆ ನಡೆದೇ ಇಲ್ಲ. ಇದರ ನಡುವೆ ಇತ್ತೀಚೆಗೆ 243 ವಾರ್ಡ್ಗಳಿಂದ 225 ಕ್ಕೆ ವಾರ್ಡ್ಗಳ ಸಂಖ್ಯೆ ಇಳಿಸಿದ್ದ ಹೊಸ ಸರ್ಕಾರ, ಸಾರ್ವಜನಿಕರ ಅಕ್ಷೇಪಣೆ ಹಾಗೂ ಸಲಹೆ ಕೇಳಿತ್ತು.
ಈ ಸಂಬಂಧ 3 ಸಾವಿರದಷ್ಟು ಆಕ್ಷೇಪಣೆಗಳು ಬಂದಿದ್ದವು. ಎಲ್ಲವನ್ನೂ ಪರಿಶೀಲನೆ ಮಾಡಿದ ಬಳಿಕ 225 ವಾರ್ಡ್ಗಳನ್ನ ಅಧಿಕೃತಗೊಳಿಸಿ ಇವತ್ತು ಆದೇಶ ಹೊರಡಿಸಲಾಗಿತ್ತು. 2011ರ ಜನಗಣತಿಯ ಆಧಾರದ ಮೇಲೆ ಈ ವಿಂಗಡಣೆ ಮಾಡಲಾಗಿತ್ತು. 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿ ನಡೆಸಿರುವ ಸರ್ಕಾರ 225 ವಾರ್ಡ್ಗಳನ್ನ ಅಧಿಕೃತಗೊಳಿಸಿ ಅಧಿಸೂಚನೆ ಹೊರಡಿಸಿತ್ತು.
2011ರ ಜನಗಣತಿ ಆಧಾರದ ಮೇಲೆ ವಾರ್ಡ್ಗಳನ್ನ ಪುನರ್ ವಿಂಗಡಣೆ ಮಾಡಿ ಅಂತಿಮಗೊಳಿಸಲಾಗಿದೆ