ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಬಜೆಟ್ನ್ನು ಬಿಜೆಪಿ (BJP) ಶಾಸಕ ಎಸ್.ಟಿ ಸೋಮಶೇಖರ್ (S.T Somashekar) ಹಾಡಿ ಹೊಗಳಿದ್ದಾರೆ. ಈ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.
Karnataka Budget 2024: ಬಜೆಟ್ʼನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆಯಾಗಿದೆ ಗೊತ್ತಾ: ಇಲ್ಲಿದೆ ವಿವರ!
ನಮ್ಮ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಮಾಡಲು ಕೇಳಿದ್ದೆವು ಅದಕ್ಕೆ 1700 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಬರೀ ಯಶವಂತಪುರ ಕ್ಷೇತ್ರದಲ್ಲಷ್ಟೇ ಅಲ್ಲ. ಬೆಂಗಳೂರಿನ 28 ಕ್ಷೇತ್ರಕ್ಕೂ ಇದರಿಂದ ಅನುಕೂಲವಾಗಲಿದೆ. ಇದೊಂದು ಒಳ್ಳೆಯ ಬಜೆಟ್ ಎಂದು ಶಾಸಕ ಎಸ್ .ಟಿ ಸೋಮಶೇಖರ್ ಹೇಳಿದ್ದಾರೆ.
110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ. ಸಂಚಾರ ಸಮಸ್ಯೆ ನಿವಾರಣೆ ಬಗ್ಗೆ ಹೇಳಿದ್ದಾರೆ. ವೈಟ್ ಟ್ಯಾಪಿಂಗ್ ಕ್ಲಿಯರ್ ಮಾಡುವ ಬಗ್ಗೆ ಬಜೆಟ್ನಲ್ಲಿ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ಬಿಟ್ಟು ಹೊರಗೆ ಏನಿದೆ ಎಂದು ನೋಡಿಲ್ಲ ಎಂದಿದ್ದಾರೆ.