ಬೆಂಗಳೂರು:- ರಾಜಧಾನಿ ಬೆಂಗಳೂರಿನ ಆಟೋಗಳಲ್ಲಿ ಪ್ರಯಾಣಿಸುವ ಮುನ್ನ ಎಚ್ಚರ ಎಚ್ಚರ. ಪರ್ಮಿಟ್ ರಿನಿವಲ್ ಆಗದೆ ಸಾವಿರಾರು ಆಟೋಗಳು ಸಂಚರಿಸುತ್ತಿವೆ ಎನ್ನಲಾಗಿದೆ.
ನಗರದಲ್ಲಿ 2020ರ ಹಿಂದೆ ನೋಂದಣಿ ಆಗಿರುವ ಆಟೋ ಪರ್ಮಿಟ್ಗಳ ದಾಖಲೆಗಳೇ ಆರ್ಟಿಒ ಕಚೇರಿಯಲ್ಲಿ ಇಲ್ಲವಂತೆ! ಬೆಂಗಳೂರಿನ ಶಾಂತಿನಗರ ಮುಖ್ಯ ಕಚೇರಿಯಲ್ಲಿ ವಾಹನ್- 3 ಅಡಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋಗಳ ದಾಖಲೆ ಇಲ್ಲ ಎಂಬುದು ತಿಳಿದುಬಂದಿದೆ. 2020 ರ ವರೆಗೆ ವಾಹನ್- 3 ಅಡಿಯಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗುತಿತ್ತು. 2020 ಮಾರ್ಚ್ ನಂತರ ವಾಹನ್ – 4 ಅಡಿಯಲ್ಲಿ ವಾಹನಗಳ ನೋಂದಣಿ ಮಾಡಲಾಗುತ್ತಿದೆ. ಆದರೆ ವಾಹನ್- 3ರ ಅಡಿಯಲ್ಲಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋ ಪರ್ಮಿಟ್ಗಳ ದಾಖಲೆಗಳೇ ಇಲ್ಲವಾಗಿದೆ
ದಾಖಲೆಗಳು ಇಲ್ಲದ ಕಾರಣ ಆಟೋ ಪರ್ಮಿಟ್ಗಳ ರಿನಿವಲ್ ಆಗುತ್ತಿಲ್ಲ. ಪರ್ಮಿಟ್ ರಿನಿವಲ್ ಆಗದಿರುವ ಆಟೋಗಳಿಗೆ ಆರ್ಟಿಓ ಅಧಿಕಾರಿಗಳು ಬರೋಬ್ಬರಿ ಐದು ಸಾವಿರ ರುಪಾಯಿ ದಂಡ ವಿಧಿಸುತ್ತಿದ್ದಾರೆ.
ಪರ್ಮಿಟ್ ರಿನಿವಲ್ ಆಗದ ಆಟೋಗಳಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವ ವೇಳೆ ಆಟೋ ಅಪಘಾತಕ್ಕೀಡಾದರೆ ಇನ್ಶುರೆನ್ಸ್ ಕ್ಲೈಮ್ ಆಗುವುದಿಲ್ಲ. ಈ ಬಗ್ಗೆ ಪ್ರಯಾಣಿಕರು ಕೂಡ ಆರ್ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.