ಬೆಂಗಳೂರು:- ಬೆಂಗಳೂರು ಹುಡುಗರ ತಂಡವು ಕೂಲ್ ಟ್ರೀ ಅಭಿಯಾನಕ್ಕೆ ಮುಂದಾಗಿದ್ದು, ಈ ಹಿಂದೆ ಯಲಹಂಕಾದಲ್ಲಿ ಯಶಸ್ವಿಯಾದ ಬೆನ್ನಲ್ಲೇ ಇಂದಿರಾನಗರದಲ್ಲಿ ಅಭಿಯಾನ ಆರಂಭಿಸಲು ತಂಡ ತಯಾರು ಮಾಡಿಕೊಂಡಿದೆ.
ಇಂದಿರಾನಗರದ ರಾಮೇಶ್ವರ ಕೆಫೆಯಿಂದ ಅಭಿಯಾನ ಶುರುವಾಗಿದೆ.
ಏನಿದು ಕೂಲ್ ಟ್ರೀ ಅಭಿಯಾನ!?
ಬಿಸಿಲಿಗೆ ಮರದ ತೊಗಟೆಗಳು ಒಣಗುವುದರಿಂದ ಗೆದ್ದಲು ಸುಲಭವಾಗಿ ಮರವನ್ನು ತಿಂದು ಹಾಕುತ್ತವೆ. ಇದರಿಂದ ಮರ ಸಾಯುವ ಅಥವಾ ಅದರ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಪೈರೋಥೀನ್, ಆರ್ಗನೋಫಾಸ್ಟೆಡ್, ಮೆಲಾಥಿನ್ ಮಿಶ್ರಣ, ಬೇವಿನ ಎಣ್ಣೆ, ಸೂರ್ಯ ಸೆಮ್ ವೈಟ್ ವಾಷ್ ಬಳಸಿ ಪೇಸ್ಟ್ ತಯಾರಿಸಲಾಗುತ್ತದೆ. ಈ ಪೇಸ್ಟ್ ಅನ್ನು ಮರದ ಕಾಂಡಗಳಿಗೆ ಹಚ್ಚುವುದರಿಂದ ಸನ್ ಸ್ಕ್ರೀನ್ ರೀತಿ ಕೆಲಸ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಸ್ವಯಂಸೇವಕರ ಸಹಯೋಗದೊಂದಿಗೆ ಪ್ರತೀ ಭಾನುವಾರ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.